ಕೋವಿಡ್ ಸಂಕಷ್ಟ : ಭಾರತಕ್ಕೆ ನೆರವು ನೀಡಲು , ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ನಿರ್ಣಯ ಅಂಗೀಕಾರ..!
ಅಮೆರಿಕಾ : ಕೊರೊನಾ 2ನೇ ಅಲೆ ಸಂಕಷ್ಟಕ್ಕೆ ಸಿಲುಕಿರುವ ಭಾರತಕ್ಕೆ ನೆರವು ಒದಗಿಸಲು ಅಮೆರಿಕದ ಅಧ್ಯಕ್ಷ ಬೈಡನ್ ನೇತೃತ್ವದ ಆಡಳಿತವನ್ನು ಒತ್ತಾಯಿಸುವ ನಿರ್ಣಯವನ್ನು ಅಮೆರಿಕದ ಪ್ರತಿನಿಧಿಗಳ ಸಭೆಯು ಒಮ್ಮತದ ಮೂಲಕ ಅಂಗೀಕರಿಸಲಾಗಿದೆ.
ಅಮೆರಿಕ ಸರ್ಕಾರದ ಮನವಿ ಮೇರೆಗೆ ಭಾರತ ಸರ್ಕಾರವು ಕೆಲವು ಕೋವಿಡ್ ಚಿಕಿತ್ಸಕಗಳ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸಿತ್ತು ಎಂಬುದನ್ನು ನೆನಪಿಸಿರುವ ಕಾಂಗ್ರೆಸ್ಸಿನ ಬ್ರಾಡ್ ಶೆರ್ಮನ್ ಮತ್ತು ಸ್ಟೀವ್ ಚಬೋಟ್ ಅವರು ನಿರ್ಣಯ ಮಂಡಿಸಿದ್ದರು.
ಭಾರತದ ಔಷಧ ಉದ್ಯಮವು ಸಾಂಕ್ರಾಮಿಕ ರೋಗಕ್ಕೆ ಜಾಗತಿಕ ಪರಿಹಾರದ ಒಂದು ಪ್ರಮುಖ ಭಾಗವಾಗಿದೆ. ವಿಶೇಷವಾಗಿ, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
93 ದೇಶಗಳಿಗೆ 66.36 ಮಿಲಿಯನ್(6.63 ಕೋಟಿ) ಡೋಸ್ ಲಸಿಕೆಗಳನ್ನು ರಫ್ತು ಮಾಡಿದ್ದು, ಭಾರತವು ಕೋವಿಡ್ ಲಸಿಕೆಗಳನ್ನು ಉತ್ಪಾದಿಸುವ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಎಂದು ಉಲ್ಲೇಖಿಸಲಾಗಿದೆ.