ಕೊರೊನಾ ಸಂಕಷ್ಟ : ಭಾರತದಿಂದ ತಕ್ಷಣ ವಾಪಸ್ ಆಗುವಂತೆ ಬುಲಾವ್..!
ಅಮೆರಿಕಾ : ಬಾರತದಲ್ಲಿ ಕೊರೊನಾ ಮಹಾಮಾರಿ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ ಅಮೆರಿಕಾ ತನ್ನ ದೇಶದ ಪ್ರಜೆಗಳು ಶೀಘ್ರವೇ ಭಾರತದಿಂದ ವಾಪಸ್ ಆಗುವಂತೆ ಕರೆ ಕೊಟ್ಟಿದೆ.
ಭಾರತದಲ್ಲಿ ಈಗ ಇರುವ ಆರೋಗ್ಯ ಪರಿಸ್ಥಿತಿ ಕಾರಣ ಸಾಧ್ಯವಾದಷ್ಟು ಬೇಗ ಬೇಗ ಅಲ್ಲಿಂದ ಹೊರಟು ಬರುವಂತೆ ತನ್ನ ದೇಶದ ಪ್ರಜೆಗಳಿಗೆ ಸೂಚನೆ ನೀಡಿದೆ.
ಭಾರತದಿಂದ ವಾಪಸ್ ಬರಬೇಕೆಂದು ಬಯಸುವ ಅಮೆರಿಕನ್ನರು ಪ್ಯಾರಿಸ್ ಮತ್ತು ಫ್ರಾಂಕ್ಫರ್ಟ್ ವಿಮಾನ ಮಾರ್ಗವನ್ನು ಬಳಸಿಕೊಳ್ಳಬಹುದು ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.
ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿರುವ ಕಾರಣ ಭಾರತದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ಸೀಮಿತ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ ಎಂದು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಹೇಳಿದೆ.