ಸಂಕಷ್ಟದ ಸಮಯದಲ್ಲಿ ಭಾರತದ ಪರ ನಿಂತ ವಿಶ್ವದ ದೊಡ್ಡಣ್ಣ –  ಮೊದಲ ಹಂತದ ವೈದ್ಯಕೀಯ ಪರಿಕರಗಳು ದೇಶಕ್ಕೆ ಆಗಮನ..!

1 min read

ಸಂಕಷ್ಟದ ಸಮಯದಲ್ಲಿ ಭಾರತದ ಪರ ನಿಂತ ವಿಶ್ವದ ದೊಡ್ಡಣ್ಣ –  ಮೊದಲ ಹಂತದ ವೈದ್ಯಕೀಯ ಪರಿಕರಗಳು ದೇಶಕ್ಕೆ ಆಗಮನ..!

ನವದೆಹಲಿ: ದೇಶದಲ್ಲಿ ಕೊರೊನಾ 2ನೇ ಅಲೆಯ ಪ್ರಖರತೆಗೆ ಜನ ತತ್ತರಿಸಿ ಹೋಗಿದ್ದಾರೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ , ಬೆಡ್ ಕೊರತೆಯಿಂದ , ಆಕ್ಸಿಜನ್ ಕೊರತೆಯಿಂದ, ಚಿಕಿತ್ಸೆ ಫಲಿಸದೇ ನಿತ್ಯ ಸಾವಿರಾರು ಜನ ಸಾಯ್ತಿದ್ದಾರೆ. ಇಂತಹ ವಿಷಮ ಸಂಕಷ್ಟದ ಪರಿಸ್ಥಿತಿಯಲ್ಲಿ ಮಿತ್ರ ರಾಷ್ಟ್ರಗಳು ಸೇರಿದಂತೆ  ಅನೇಕ  ದೇಶಗಳು ಭಾರತದ ಹೆಗಲಿಗೆ ನಿಂತಿವೆ. ಭಾರತಕ್ಕೆ ಬೆಂಬಲ ನೀವೆ.

ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕ ಕೊರೊನಾ ತುರ್ತು ಸಹಾಯಕ್ಕಾಗಿ ಮೊದಲ ಹಂತದಲ್ಲಿ ವಿವಿಧ ಅಗತ್ಯ ವೈದ್ಯಕೀಯ ಪರಿಕರಗಳನ್ನು ಬಾರತಕ್ಕೆ  ಪೂರೈಸಿದೆ. ಅಮೆರಿಕ ಕಳುಹಿಸಿದ ವಿವಿಧ ವೈದ್ಯಕೀಯ ಸೌಲಭ್ಯಗಳು ಇಂದು ಬೆಳಗ್ಗೆ ಭಾರತ ತಲುಪಿವೆ. ಸೂಪರ್ ಗೆಲಾಕ್ಸಿ ಮಿಲಿಟರಿ ಟ್ರಾನ್ಸ್ ಪೋರ್ಟರ್ ನಲ್ಲಿ ವೈದ್ಯಕೀಯ ವಸ್ತುಗಳನ್ನು ಕಳುಹಿಸಲಾಗಿದ್ದು, ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಾಗಿದೆ. 400ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್‍ಗಳು, 1 ಮಿಲಿಯನ್ ಗೂ ಅಧಿಕ ಕೊರೊನಾ ವೈರಸ್ ರ್ಯಾಪಿಡ್ ಟೆಸ್ಟ್ ಕಿಟ್‍ಗಳು, ಇತರೆ ಆಸ್ಪತ್ರೆ ಪರಿಕರಗಳು ಸೇರಿದಂತೆ ವಿವಿಧ ವಸ್ತುಗಳನ್ನು ಇಂದು ಸ್ವೀಕರಿಸಲಾಗಿದೆ.

ಯುಎಸ್ ಎಂಬಸಿ ಈ ಕುರಿತು ಟ್ವೀಟ್ ಮಾಡಿದ್ದು, ಪೂರೈಕೆ ಮಾಡಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿದೆ. ಕೊರೊನಾ ತುರ್ತು ಪರಿಹಾರಕ್ಕಾಗಿ ಮೊದಲ ಹಂತದಲ್ಲಿ ವಿವಿಧ ಪರಿಕರಗಳನ್ನು ಅಮರಿಕದಿಂದ ಭಾರತಕ್ಕೆ ಪೂರೈಸಲಾಗಿದೆ. 70 ವರ್ಷಗಳ ಸಹಕಾರವನ್ನು ಮುಂದುವರಿಸಿದ್ದೇವೆ. ಅಮೆರಿಕ ಭಾರತದ ಜೊತೆ ಇರಲಿದೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ ಎಂದು ತಿಳಿಸಿದೆ. ಅಲ್ಲದೆ ಹ್ಯಾಷ್ ಟ್ಯಾಗ್‍ನೊಂದಿಗೆ ಯುಎಸ್ ಇಂಡಿಯಾ ದೋಸ್ತಿ ಎಂದು ಬರೆಯಲಾಗಿದೆ.

ಅಮೆರಿಕ ಮುಂಬರುವ ದಿನಗಳಲ್ಲಿ ತುರ್ತು ಪರಿಹಾರವಾಗಿ 100 ಮಿಲಿಯನ್ ಡಾಲರ್‍ಗೂ ಅಧಿಕ ಮೌಲ್ಯದ ವೈದ್ಯಕೀಯ ವಸ್ತುಗಳನ್ನು ಪೂರೈಸಲಿದೆ ಎಂದು ಸ್ಟೇಟ್ ಡಿಪಾರ್ಟ್‍ಮೆಂಟ್ ವಕ್ತಾರ ನೆಡ್ ಪ್ರೈಸ್ ಗುರುವಾರ ಹೇಳಿದ್ದಾರೆ.

‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ – ಸತೀಶ್ ನಿನಾಸಂ  

ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನ

ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ :  ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!

ಭಾರತಕ್ಕೆ ಸಹಾಯ ಮಾಡಿ ಎಂದು ಬೇಡಿಕೊಂಡ ಪ್ರಿಯಾಂಕಾ ಪತಿ ನಿಕ್ ಜೋನಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd