ಅಮಿರ್ ಖಾನ್ – ರೀನಾ 16 ವರ್ಷದ ದಾಂಪತ್ಯ ಜೀವನ ಕೊನೆಗೊಂಡಿದ್ದು , ಹೇಗೆ – 2ನೇ ಪತ್ನಿ ಕಿರಣ್ ಪರಿಚಯವಾಗಿದ್ದು ಹೇಗೆ..?   

1 min read

ಅಮಿರ್ ಖಾನ್ – ರೀನಾ 16 ವರ್ಷದ ದಾಂಪತ್ಯ ಜೀವನ ಕೊನೆಗೊಂಡಿದ್ದು , ಹೇಗೆ – 2ನೇ ಪತ್ನಿ ಕಿರಣ್ ಪರಿಚಯವಾಗಿದ್ದು ಹೇಗೆ..?

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ವಿಚ್ಛೇಧನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.. ಅಮಿರ್ ಖಾನ್ ತೀವ್ರ ಟೀಕೆಗೆ , ಟ್ರೋಲ್ ಗೆ ಗುರಿಯಾಗಿದ್ದಾರೆ.

ಅಂದ್ಹಾಗೆ ಅಮಿರ್ ಖಾನ್ 2005ರಲ್ಲಿ  ಬೆಂಗಳೂರು ಮೂಲದವರಾಗಿದ್ದ ಕಿರಣ್ ರಾವ್ ಅವರನ್ನ ಮದುವೆಯಾಗಿದ್ದರು.. ಕಿರಣ್ ರಾವ್ ಅವರು ಅಮಿರ್ ಖಾನ್ ಗೆ ಲಗಾನ್ ಸೆಟ್ ನಲ್ಲಿ ಪರಿಚಯವಾಗಿದ್ದರು.. ಆದ್ರೆ ಅದಕ್ಕೂ ಮೊದಲು ಅಮಿರ್ ಖಾನ್ ರೀನಾ ದತ್ತಾ ಅವರನ್ನ ಮದುವೆಯಾಗಿದ್ದರು. ಬರೋಬ್ಬರಿ 16 ವರ್ಷಗಳ ದಾಂಪತ್ಯದ ನಂತರ ಇಬ್ಬರೂ 2002ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು..

ಅಮಿರ್ ಕಾನ್ ಹಾಗೂ ಮೊದಲ ಪತ್ನಿ ರೀನಾಗೆ ಇಬ್ಬರು ಮಕ್ಕಳಿದ್ದಾರೆ.. ಮಗ ಜುನೇದ್ ಖಾನ್ , ಮಗಳು ಇರಾ ಖಾನ್.. ಇವರಿಬ್ಬರು ನೆರೆಹೊರೆಯವರಾಗಿದ್ದರು.. ಮೊದಲಿಗೆ ಅಮಿರ್ ಖಾನ್ ಅವರಿಗೆ ರೀತ=ನಾ ಅವರ ಮೇಲೆ ಪ್ರೀತಿ ಹುಟ್ಟಿದಾಗ ಅವರು ಅದನ್ನ ರೀನಾ ಬಳಿ ಹೇಳಿಕೊಂಡಿದ್ದರು.. ಆದ್ರೆ ಆಗ ಅಮಿರ್ ಪ್ರೇಮ ನಿವೇದನೆಯನ್ನ ರೀನಾ ತಿರಸ್ಕರಿಸಿದ್ದರು.

ಅದಾದ ನಂತರ ಸತತ ಪ್ರಯತ್ನಗಳ ನಂತರ ರೀನಾ ಅಮಿರ್ ಖಾನ್ ಅವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾಗಿ ಅಮಿರ್ ಖಾನ್ ಹಿಂದೆ  ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದರು. ಅದಾದ ನಂತರ ಮದುವೆಯಾಗಿ ಬಳಿಕ 16 ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರು ಬೇರೆಬೇರೆಯಾಗಿದ್ದರು..

ಟ್ವಿಟ್ಟರ್ ನಲ್ಲಿ ಬಾಯ್ಕಟ್ ಅಮಿರ್ ಖಾನ್ ಟ್ರೆಂಡ್ – ಅಮಿರ್ ಖಾನ್ ವಿರುದ್ಧ ಸಿಡಿದೆದ್ದ ನೆಟ್ಟಿಗರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd