ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಅಮೃತ್ ಅಪಾರ್ಟ್ ಮೆಂಟ್ಸ್ …!
ಗುರುರಾಜ್ ಕುಲಕರ್ಣಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅಮೃತ್ ಅಪಾರ್ಟ್ ಮೆಂಟ್ಸ್ ನವೆಂಬರ್ ನಲ್ಲಿ ತೆರೆ ಕಾಣಲಿದೆ. ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರದ ಫಸ್ಟ್ ಲುಕ್, ಟೀಸರ್ ಗಳು ಕೂಡ ಸಾಮಾಜಿಕ ಜಾಲ ತಾಣದಲ್ಲಿ ಸಕತ್ತಾಗಿಯೇ ಸದ್ದು ಮಾಡುತ್ತಿವೆ. ಅಲ್ಲದೆ ಬೆಂಗಳೂರು ನಗರವನ್ನು ಗಿಯಾ ಗಿಯಾ ಹಾಡಿನ ಮೂಲಕ ವರ್ಣನೆ ಮಾಡಿದ್ದಾರೆ. ನಾವು ಬಂದೇವಾ ಅಂತನೇ ಈ ಸಾಂಗ್ ಫೇಮಸ್ ಅಗುತ್ತಿದೆ.
ಮರ್ಡರ್ ಮಿಸ್ಟ್ರೀಯನ್ನೊಳಗೊಂಡ ಈ ಚಿತ್ರದಲ್ಲಿ ತಾರಕ್ ಪೊನ್ನಪ್ಪ, ಬಾಲಾಜಿ ಮನೋಹರ್ ಮತ್ತು ಊರ್ವಶಿ ಗೋವರ್ಧನ್, ಮಾನಸ ಜೋಶಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಎಸ್. ಡಿ. ಅರವಿಂದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಅಕ್ಸಿಡೆಂಟ್, ಲಾಸ್ಟ್ ಬಸ್ ಸಿನಿಮಾಗಳಲ್ಲಿ ತೆರೆಯ ಹಿಂದೆ ಕೆಲಸ ಮಾಡಿದ್ದ ಗುರುರಾಜ್ ಕುಲಕರ್ಣಿ ಅವರು ಈ ಚಿತ್ರಕ್ಕೆ ತಾವೇ ಬಂಡವಾಳ ಹಾಕಿ ನಿರ್ದೇಶನ ಕೂಡ ಮಾಡಿದ್ದಾರೆ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಗುರುರಾಜ್ ಕುಲಕರ್ಣಿ ಅವರು ಪ್ಲಾನ್ ಮಾಡಿಕೊಂಡು ಚಿತ್ರವನ್ನು ಬಿಡುಗಡೆಗೆ ಸಿದ್ಧಪಡಿಸುತ್ತಿದ್ದಾರೆ. ಚಿತ್ರದ ಪ್ರತಿ ಫ್ರೇಮ್ ಗಳ ಮೇಲೆ ನಿಗಾ ಇಟ್ಟುಕೊಂಡು ಸಂಕಲನವನ್ನು ಮಾಡಿದ್ದಾರೆ. ಅದ್ದೂರಿ ಚಿತ್ರಗಳ ಭರಾಟೆಯ ನಡುವೆ ಅಮೃತ್ ಅಪಾರ್ಟ್ ಮೆಂಟ್ಸ್ ಚಿತ್ರವನ್ನು ಸೈಲೆಂಟ್ ಆಗಿ ಸಿದ್ಧಪಡಿಸಿಕೊಂಡು ಅದ್ದೂರಿಯಾಗಿ ಬಿಡುಗಡೆ ಮಾಡುವ ಲೆಕ್ಕಚಾರದಲ್ಲಿದ್ದಾರೆ.
ಈಗಾಗಲೇ ಮೊದಲ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರ ತಂಡ ಮುಂದಿನ ವಾರ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡಲಿದೆ. ಎಲ್ಲವೂ ಅಂದುಕೊಂಡಂತೆ ಅದ್ರೆ ನವೆಂಬರ್ ಎರಡನೇ ವಾರ ತೆರೆಗೆ ಬರುವ ಸಾಧ್ಯತೆ ಇದೆಯಂತೆ.