ಜೈಪುರ: ಓರ್ವ ವ್ಯಕ್ತಿ ಸಿಟ್ಟಿನ ಭರದಲ್ಲಿ ಇಬ್ಬರ ಮೇಲೆ ಕಾರು ಹರಿಸಿರುವ ಘಟನೆಯೊಂದು ನಡೆದಿದೆ.
ವಾಗ್ವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಕಾರು ಹರಿಸಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ಜೈಪುರದಲ್ಲಿ ನಡೆದಿದೆ. ಜೈಪುರದ ಜವಾಹರ್ ಸರ್ಕಲ್ ಪ್ರದೇಶದ (Jawahar Circle area )ಹೋಟೆಲ್‌ನ ಹೊರಗೆ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿ ಮಂಗೇಶ್ ಅರೋರಾ, ಉಮಾ ಮತ್ತು ಆಕೆಯ ಸ್ನೇಹಿತ ರಾಜ್‌ಕುಮಾರ್ ಮೇಲೆ ಕಾರು ಹರಿಸಿದ್ದಾನೆ ಎನ್ನಲಾಗಿದೆ. ವಿಡಿಯೋದಲ್ಲಿ ಪುರುಷರ ಗುಂಪು ಕಾರಿನ ಮುಂದೆ ನಿಂತಿದ್ದು, ಅವರಲ್ಲಿ ಒಬ್ಬರು ಕಾರನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಮಂಗೇಶ್ ತನ್ನ ಕಾರನ್ನು ಉಮಾ ಮತ್ತು ಆಕೆಯ ಗೆಳೆಯನ ಮೇಲೆ ಹರಿಸಿದ್ದಾನೆ. ಉಮಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರಾಜ್ ಕುಮಾರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.