ಚಂದನವನದ ಏಳಿಗೆಗಾಗಿ ಬುಧವಾರ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಇಡೀ ಸಿನಿ ರಂಗವೇ ಭಾಗವಹಿಸಿತ್ತು. ನಾಗಾರಾಧನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಿರಿಯ ನಟಿ ಜ್ಯೋತಿ (Actress Jyothi) ಭಾವೋದ್ವೇಗಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ನಾಗಾರಾಧನೆ ನಡೆಯುತ್ತಿದ್ದ ಸಂದರ್ಭದಲ್ಲಿ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಈ ಘಟನೆ ನೋಡಿ ಆಶ್ಚರ್ಯ ಹಾಗೂ ಶಾಕ್ ಗೆ ಒಳಗಾಗಿದ್ದಾರೆ.
ರಾಕ್ಲೈನ್ ವೆಂಕಟೇಶ್ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದ್ದು, ಹಿರಿಯ ನಟಿ ಗಿರಿಜಾ ಲೋಕೇಶ್, ಜಗ್ಗೇಶ್, ಶರಣ್, ಲವ್ಲಿ ಸ್ಟಾರ್ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಅಭಿಷೇಕ್ ಅಂಬರೀಶ್, ಗುರುಕಿರಣ್, ಪದ್ಮಜಾ ರಾವ್ ಸೇರಿದಂತೆ ತಾರಾ ದಂಡೇ ಭಾಗವಹಿಸಿತ್ತು.