ಕೌನ್ ಬನೇಗಾ ಕರೋರ್ಪತಿ ನಡೆಸುತ್ತಿರುವ ಬಿಗ್ ಬಿ ವಿದಾಯದ ಭಾಷಣ ಮಾಡಿ ಭಾವುಕರಾಗಿದ್ದಾರೆ.
ಈ ಸೀಸನ್ ಮುಗಿಯಿತಾ? ಅಥವಾ ಅವರೇ ವಿದಾಯ ಹೇಳಿದರಾ ಎಂಬುವುದು ಮಾತ್ರ ತಿಳಿದು ಬಂದಿಲ್ಲ. ಈಗಾಗಲೇ ಬಿಬಿಎಸ್ ನ ಹಲವಾರು ಸೀಸನ್ ಗಳನ್ನು ಅಮಿತಾಭ್ ಮಾಡಿದ್ದಾರೆ. ಆದರೆ, ಎಂದಿಗೂ ಅವರು ಈ ರೀತಿಯ ಭಾಷಣ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಮಾಡಿದ್ದರಿಂದ ಅಮಿತಾಭ್ ಇನ್ಮುಂದೆ ಕೌನ್ ಬನೇಗಾ ಕರೋರ್ ಪತಿ ಮಾಡುವುದಿಲ್ಲವೇ ಎಂಬ ಪ್ರಶ್ನೆ ವ್ಯಕ್ತವಾಗುತ್ತಿದೆ.
ಕೊನೆಯ ಸಂಚಿಕೆಯ ಶೂಟಿಂಗ್ ಮುಗಿಸಿ, ವಿದಾಯದ ಮಾತುಗಳನ್ನು ಅಮಿತಾಭ್ ಆಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.