ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ವೃತ್ತದಲ್ಲಿ ಐಸ್ ಕ್ರೀಮ್ ಕಂಟೇನರ್ (Ice Cream Container) ಪಲ್ಟಿಯಾದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೊಮ್ಮಸಂದ್ರದಿಂದ ಹೊಸಕೋಟೆಗೆ ತೆರಳುತ್ತಿದ್ದ ಐಸ್‌ಕ್ರೀಮ್ ಕಂಟೇನರ್ ಬೆಂಗಳೂರು ಹೊರವಲಯದಲ್ಲಿರುವ ಆನೇಕಲ್‌ನ ಅತ್ತಿಬೆಲೆಯಲ್ಲಿ ಅಪಘಾತಕ್ಕೊಳಗಾಗಿದೆ. ವೇಗವಾಗಿ ಬಂದ ಹಿನ್ನೆಲೆ ಕಂಟೇನರ್ ಪಲ್ಟಿಯಾಗಿ ಎನ್ನಲಾಗಿದ್ದು, ಐಸ್ ಕ್ರೀಮ್ ರಸ್ತೆಯಲ್ಲಿಯೇ ಚೆಲ್ಲಾಪಿಲ್ಲಿಯಾಗಿವೆ.
ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಕಂಟೇನರ್ ಚಾಲಕ ಹಾಗೂ ಕ್ಲೀನರ್ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಅತ್ತಿಬೆಲೆ ಪೊಲೀಸರು ಆಗಮಿಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮೃತದೇಹಗಳನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ಸಾಗಿಸಲಾಗಿದೆ.








