ಇಂಫಾಲ್: ಏರ್ ಪೋರ್ಟ್ ಮೇಲೆ ಅಪರಿಚಿತ ಏರ್ ಪೋರ್ಟ್ ಹಾರಾಟ ನಡೆಸಿದ್ದು, ಆತಂಕ ವ್ಯಕ್ತವಾಗಿದೆ.
ಅಪರಿಚಿತ ಡ್ರೋನ್‍ಗಳು ಹಾರಾಟ ನಡೆಸಿದ್ದು, ವಿಮಾನ ಹಾರಾಟದ ಕಾರ್ಯಾಚರಣೆ ರದ್ದು ಮಾಡಲಾಗಿದೆ. ಹೀಗಾಗಿ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೀಗಾಗಿಯೇ ಕೆಲವು ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಕೆಲವು ವಿಮಾನಗಳನ್ನು ಮಾರ್ಗ ಮಧ್ಯದಿಂದಲೇ ಬೇರೆಡೆ ತಿರುಗಿಸಲಾಗಿದೆ. ಚಿಪೆಮ್ಮಿ ಕೀಶಿಂಗ್, ಇಂಫಾಲ್ (Imphal) ನಿಯಂತ್ರಿತ ವಾಯುಪ್ರದೇಶದಲ್ಲಿ ಅಪರಿಚಿತ ಹಾರುವ ವಸ್ತುವೊಂದು ಕಂಡು ಬಂದ ಹಿನ್ನೆಲೆಯಲ್ಲಿ ಎರಡು ವಿಮಾನ ತಿರುಗಿಸಲಾಗಿದ್ದು, ಮೂರು ವಿಮಾನಗಳ ಹಾರಾಟ ವಿಳಂಬಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ ಕುಕಿಸ್ ಮತ್ತು ಮೇಥಿ ನಡುವೆ ನಡೆದ ಜನಾಂಗೀಯ ಘರ್ಷಣೆ ನಡೆಯುತ್ತಿದೆ. ಈ ಘರ್ಷಣೆಯಲ್ಲಿ ಇಲ್ಲಿಯವರೆಗೂ ಸುಮಾರು 200 ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ಈ ಬೆಳವಣಿಗೆ ಮಧ್ಯೆ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.