Suma Kanakala | ವಿಚ್ಛೇದನ ಬಗ್ಗೆ ಸುಮಾ ಕನಕಾಲ ಸ್ಪಷ್ಟನೆ
ತೆಲುಗಿನ ಪ್ರಮುಖ ಆಂಕರ್ ಸುಮಾ ಕನಕಾಲ ಸಾಕಷ್ಟು ಸಮಯದ ಬಳಿಕ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಜಯಮ್ಮ ಪಂಚಾಯತಿ’ ಚಿತ್ರದಲ್ಲಿ ಅವರು ನಾಯಕಿಯಾಗಿದ್ದು, ವಿಜಯ್ ಕಲಿವರಪು ನಿರ್ದೇಶನದ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕಿರಣವಾಣಿ ಅವರ ಸಂಗೀತವಿದೆ. ಚಿತ್ರವು ಮೇ 19 ರಂದು ಬಿಡುಗಡೆಯಾಗಲಿದೆ.
ಈ ಸಂದರ್ಭದಲ್ಲಿ, ಪ್ರಚಾರದ ಭಾಗವಾಗಿ ಸುಮಾ ಸರಣಿ ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಒಂದು ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿಚ್ಛೇದನದ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಚಾನಲ್ ನ ಆಂಕರ್ ನಿಮ್ಮ ವಿಚ್ಛೇದನ ಸುದ್ದಿ ನಿಜವೇ ಎಂದು ಪ್ರಶ್ನಿಸಿದರು. ಇದಕ್ಕೆ ಸುಮಾ, ನಾನು ರಾಜೀವ್ ಅವರನ್ನು ಮದುವೆಯಾಗಿ 23 ವರ್ಷಗಳು ಕಳೆದಿವೆ. ಈ ಈ 23 ವರ್ಷಗಳಲ್ಲಿ ನಾವು ತುಂಬಾ ಸಂತೋಷವಾಗಿದ್ದೇವೆ.
ಈ ರೀತಿಯ ವದಂತಿಗಳು ಬಂದಾಗಲೆಲ್ಲಾ ನಾನು ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡುತ್ತಾರೆ.
ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ. ಇಂಡಸ್ಟ್ರಿಯಲ್ಲಿ ಈ ರೀತಿಯ ವದಂತಿಗಳು ಸಾಮಾನ್ಯ. ಸೆಲೆಬ್ರಿಟಿಗಳು ಅಂದ್ಮೇಲೆ ಇಂತಹ ವದಂತಿಗಳು ಬರುತ್ತಲೇ ಇರುತ್ತವೆ. ಇದರಿಂದ ಮಾನಸಿಕವಾಗಿ ನೊಂದಿದ್ದರೂ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ’ ಎಂದಿದ್ದಾರೆ.
anchor-suma-kanakala-reacts-divorce-rumours