ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯೊಬ್ಬಳ ಕೃತ್ಯ ಕೇಳಿ ಪುರುಷರು ಕೂಡ ಬೆಚ್ಚಿ ಬೀಳುತ್ತಿದ್ದಾರೆ.
ಮೆಜೆಸ್ಟಿಕ್ನಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬಳು ವೃದ್ಧರೊಬ್ಬರಿಗೆ ಮತ್ತು ಬರುವ ಔಷಧಿ ನೀಡಿ ಚಿನ್ನಾಭರಣ ದೋಚಿ (Robbery) ಪರಾರಿಯಾಗಿರುವ ಘಟನೆ ವರದಿಯಾಗಿದೆ. ಆಭರಣಗಳನ್ನು ಕಳೆದುಕೊಂಡ ವೃದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಸದ್ಯ ಪೊಲೀಸರಿಗೆ ವೃದ್ಧನ ಮೇಲೆಯೇ ಅನುಮಾನ ವ್ಯಕ್ತವಾಗುತ್ತಿದೆ.
ವೃದ್ಧ ನಾಗರಾಜುಗೆ ಮೆಜೆಸ್ಟಿಕ್ ನಲ್ಲಿ ಮಾಧವಿ ಎಂಬ ಮಹಿಳೆ ಪರಿಚಯವಾಗಿದ್ದಾಳೆ. ಆನಂತರ ಆಕೆ ವೃದ್ಧನನ್ನು ಸಿನಿಮಾ ನೋಡಲು ಮಂತ್ರಿ ಮಾಲ್ಗೆ ಕರೆದುಕೊಂಡು ಹೋಗಿದ್ದಾಳೆ. ಈ ಸಂದರ್ಭದಲ್ಲಿ ಮತ್ತು ಬರುವ ಔಷಧಿ ನೀಡಿ 3 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಸಿನಿಮಾ ಮಧ್ಯೆಯೇ ಹೊರಟು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ. ಆದರೆ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಗರಾಜು ಹಾಗೂ ಮಹಿಳೆ ನಗು ನಗುತ್ತಲೇ ಮಂತ್ರಿ ಮಾಲ್ನಿಂದ ತೆರಳಿರುವುದು ಸೆರೆಯಾಗಿದೆ. ವೃದ್ಧನನ್ನು ಬ್ಲಾಕ್ ಮೇಲ್ ಮಾಡಿರಬಹುದೇ ಎಂಬ ಕುರಿತು ತನಿಖೆ ನಡೆಯುತ್ತಿದೆ.








