ಬೆಂಗಳೂರು: ಸರ್ಕಾರವು ಮದ್ಯ ಪ್ರಿಯರಿಗೆ ಮತ್ತೆ ಶಾಕ್ ನೀಡಿದ್ದು, ಅಕ್ಟೋಬರ್ ಮೊದಲ ವಾರದಿಂದಲೇ ಮತ್ತೆ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವರ್ಷದಲ್ಲಿ ಎರಡು ಬಾರಿ ಮದ್ಯ ದರ ಏರಿಕೆ (Liquor Price Increase) ಮಾಡಿ ಸರ್ಕಾರ ಶಾಕ್ ನೀಡಿತ್ತು. ಈಗ ಮತ್ತೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ.
ಸಿದ್ದರಾಮಯ್ಯನವರು (CM Siddaramaiah) ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು. ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕ ಹೆಚ್ಚಿಸಿತ್ತು.
ಈಗ ಯರ್ ಬೆಲೆ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ಅ.1 ರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆ.29ರಿಂದ ಪ್ರೀಮಿಯಂ, ಸೆಮಿ ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಬಿಯರ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ.
ಬಿಯರ್ ಈಗಿನದರ ಪರಿಷ್ಕೃತ ದರ ಸಾಧ್ಯತೆ
ಬೂಮ್ ಸ್ಟ್ರಾಂಗ್ 163 172/175
ಬಡ್ವೈಸರ್ ಮ್ಯಾಗ್ನಮ್ 213/230
ಬಡ್ವೈಸರ್ ಪ್ರಿಮಿಯಂ 200 215
ಕೆಎಫ್ ಪ್ರಿಮಿಯಂ 168 180
ಕೆಎಫ್ ಸ್ಟ್ರೋಮ್ 177 187
ಕೆಎಫ್ ಸ್ಟ್ರಾಂಗ್ 168 180
ಕೆಎಫ್ ಅಲ್ಟ್ರಾ 199 220
ಟ್ಯುಬರ್ಗ್ ಸ್ಟ್ರಾಂಗ್ 168 180
ಯುಬಿ ಪ್ರಿಮೀಯಂ 131 143
ಯುಬಿ ಸ್ಟ್ರಾಂಗ್ 131 142 ದರ ಇದ್ದು, ಮತ್ತಷ್ಟು ಏರಿಕೆಯಾಗುವ