ನಾನು ಮಾಜಿ ಮುಖ್ಯಮಂತ್ರಿ ಜಯಲಲಿತ ಮಗಳು’ ಎಂದ ಮಹಿಳೆ !!!!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಸತ್ತು 5 ವರ್ಷಗಳಾದ ಬಳಿಕವೂ ಅವರ ವಾರಸುದಾರರು ನಾವು ಎಂದು ಹೇಳಿಕೊಂಡು ಬರುವವರ ಸಂಖ್ಯೆ ಕಮ್ಮಿಯಾಗಿಲ್ಲ. ಇದೀಗ ಪ್ರೇಮ ಎನ್ನುವ ಮತ್ತೊಬ್ಬ ಮಹಿಳೆ ನಾನು ಜಯಲಲಿತರಾ ಮಗಳು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದು ಇದೀಗ ಚೆನ್ನೈ ಪಲ್ಲವರಂನಲ್ಲಿ ವಾಸಿಸುತ್ತಿದ್ದೇನೆ ಅಂದಿದ್ದಾರೆ.
ಚೆನ್ನೈನ ಮೆರೀನಾ ಬೀಚ್ ಬಳಿಯಿರುವ ಜಯಲಲಿತಾ ಸ್ಮಾರಕ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ಸಮಯ ಬಂದಾಗ ನಾನು ಜಯಲಲಿತಾ ಮಗಳು ಅನ್ನುವುದಕ್ಕೆ ಸಾಕ್ಷಿ ಕೊಡುತ್ತೇನೆ ಅಂದಿದ್ದಾರೆ. ಜೊತೆಗೆ ಶೀಘ್ರದಲ್ಲೇ ಶಶಿಕಲಾ ಅವರನ್ನೂ ಭೇಟಿಯಾಗುವುದಾಗಿಯೂ ಹೇಳಿದ್ದಾರೆ.
ಜಯಲಲಿತ ನನ್ನನ್ನ ಬೇಬಿ ಎಂದು ಕರೆಯುತ್ತಿದ್ದರು ಅಪೋಲೋ ಆಸ್ಪತ್ರೆ ಸೇರಿದಾಗ ನಾನು ಹಿಂದಿನ ಬಾಗಿಲ ಮೂಲಕ ಅವರನ್ನ ಬೇಟಿಯಾಗಿದ್ದೆ ಎಂದು ಪ್ರೇಮ ಎನ್ನುವರು ಹೇಳಿದ್ದಾರೆ. ಇದೇ ರೀತಿ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಮಹಿಳೆಯೊಬ್ಬರು ನಾನು ಜಯಲಲಿತ ಮಗಳು ಎಂದು ಹೇಳಿಕೊಂಡಿದ್ದಳು.