ವೇದಿಕೆ ಮೇಲೆಯೇ ಸೂರರೈ ಪೋಟ್ರು ನಟಿಯ ಜೊತೆ ಅಸಭ್ಯವಾಗಿ ನಡೆದುಕೊಂಡ ಕಾಲೇಜು ವಿದ್ಯಾರ್ಥಿ…
ತಮಿಳಿನ ಸೂರರೈ ಪೊಟ್ರು ಸಿನಿಮಾ ಮೂಲಕ ಗಮನ ಸೆಳೆದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರುಳಿ ಅವ್ರ ಜೊತೆಗೆ ಕಾಲೇಜು ವಿದ್ಯಾರ್ಥಿಯೊಬ್ಬ ಅಸಭ್ಯವಾಗಿ ನಡೆದ ಘಟನೆ ನಡೆದಿದೆ.
ವೇದಿಕೆ ಮೇಲೆ ಬಹಿರಂಗವಾಗಿಯೇ ನಟಿಯ ಜೊತೆಗೆ ವಿದ್ಯಾರ್ಥಿಯೊಬ್ಬ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು , ಆತನ ವರ್ತನೆಯಿಂದಾಗಿ ನಟಿ ಮುಜಗರಿದಿಂದ ಆತನಿಂದ ಬಿಡಿಸಿಕೊಂಡು ಪಕ್ಕಕ್ಕೆ ಸರಿದ ಘಟನೆ ನಡೆದಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮಲಯಾಳಂನ ತಂಗಮ್ ಸಿನಿಮಾದಲ್ಲಿ ಅಪರ್ಣಾ ನಟಿಸಿದ್ದು , ಈ ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ಕಾಲೇಜೊಂದಕ್ಕೆ ಆಗಮಿಸಿತ್ತು. ವೇದಿಕೆ ಮೇಲೆ ಮಾತನಾಡಲು ಬಂದ ವಿದ್ಯಾರ್ಥಿಯೊಬ್ಬ ಕುರ್ಚಿ ಮೇಲೆ ಕುಳಿತಿದ್ದ ನಟಿ ಅಪರ್ಣ ಬಾಲಮುರಳಿಗೆ ಹೂ ನೀಡಿ ಆಕೆಯ ಕೈಹಿಡಿದು ಮೇಲೆ ಏಳಿಸಿದ್ದಾನೆ.
ಅಷ್ಟೇ ಅಲ್ಲದೇ ನಟಿಯ ಭುಜ ಹಿಡಿದು ಆಕೆಯನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದನ್ನು ವಿರೋಧಿಸಿದ ಅಪರ್ಣ ಬಾಲಮುರಳಿ ಆತನಿಂದ ತಪ್ಪಿಸಿಕೊಂಡು ಪಕ್ಕಕ್ಕೆ ತೆರಳಿ ನಿಂತಿದ್ದಾರೆ.. ಅಲ್ಲದೇ ಏನಿದು ಲಾ ಕಾಲೇಜ್ ಅಲ್ವಾ ಎಂದೂ ಹೇಳಿದ್ದಾರೆ. ವಿಪರ್ಯಾಸವೆಂದ್ರೆ ಇಷ್ಟೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಈ ಘಟನೆ ನಡೆಯುವಾಗ ಸಿನಿಮಾ ತಂಡದ ಸದಸ್ಯರು ಏನೂ ಮಾಡದೇ ಸೈಲೆಂಟ್ ಆಗಿದ್ದರು.
ಚಿತ್ರದ ನಟ ವಿನೀತ್ ಶ್ರೀನಿವಾಸನ್ ಸೇರಿದಂತೆ ಚಿತ್ರತಂಡದ ಇನ್ನಿತರ ಯಾವ ಸದಸ್ಯರೂ ಸಹ ಇದನ್ನು ತಡೆಯಲು ಮುಂದಾಗಿಲ್ಲ. ಇದರ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಇಷ್ಟೆಲ್ಲಾ ಆಗುತ್ತಿದ್ದರೂ ಸುಮ್ಮನೆ ಕುಳಿತ ಅಲ್ಲಿನವರಿಗೆ ನಾಚಿಕೆಯಾಗಬೇಕು, ಈ ರೀತಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ತಕ್ಕ ಶಿಕ್ಷೆ ಆಗಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
Aparna Balamurali: A college student who misbehaved with the Soorarai Potru actress on stage…








