11 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಜೇಕಬ್ ವರ್ಗಿಸ್ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ತೆರೆಕಾಣಲಿದೆ.
ಜೇಕಬ್ ವರ್ಗಿಸ್ ಅವರ ಕಥೆ ಅಪ್ಪುಗೆ ಇಷ್ಟವಾಗಿದೆಯಂತೆ. ಅಲ್ಲದೆ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೂಡ ನೀಡಿದ್ದಾರಂತೆ. 2022ರ ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.
ಪುನೀತ್ ರಾಜ್ ಕುಮಾರ್ ಈಗಾಗಲೇ ಬೀಝಿಯಾಗಿದ್ದಾರೆ. ಈಗಾಗಲೇ ಐದಾರು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
2010ರಲ್ಲಿ ಜೇಕಬ್ ವರ್ಗಿಸ್ ನಿರ್ದೇಶನದ ಪೃಥ್ವಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಐಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹಿಟ್ ಆಗಿತ್ತು. ಅಪ್ಪು ಅಭಿನಯಕ್ಕೆ ಅಭಿಮಾನಿಗಳು ಕೂಡ ಫುಲ್ ಫಿದಾ ಆಗಿದ್ದರು.
ಈಗ ಜೇಕಬ್ ವರ್ಗಿಸ್ ಮತ್ತು ಅಪ್ಪು ಕಾಂಬಿನೇಶಷನ್ ನ ಚಿತ್ರವನ್ನು ಕೂಡ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಕಲಾವಿದರ ಆಯ್ಕೆ ಪ್ರಕ್ರಿಯೆ ತೆರೆಯ ಹಿಂದೆ ನಡೆಯುತ್ತಿದೆ.
ಒಂದು ಮೂಲಗಳ ಪ್ರಕಾರ ಈ ಚಿತ್ರ ಪುನೀತ್ ರಾಜ್ ಕುಮಾರ್ ಅವರ ಪಿಕೆಆರ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ವರ್ಷಪೂರ್ತಿ ಬಿಝಿಯಾಗಿರುವ ಅಪ್ಪು ಜೇಕಬ್ ವರ್ಗಿಸ್ ನಿರ್ದೇಶನದ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಬಹುದು.
‘ಪ್ರೇಕ್ಷಕರ ಮೆಚ್ಚುಗೆ ಪಡೆದ ನೋಡಿದವರು ಏನಂತಾರೆ’ ಸಿನಿಮಾ..ಚಿತ್ರಪ್ರೇಮಿಗಳ ಪ್ರೀತಿಗೆ ನವೀನ್ ಶಂಕರ್ ಧನ್ಯವಾದ
ಜನ ಥಿಯೇಟರ್ ಗೆ ಬರ್ತಿಲ್ಲ. ಸಿನಿಮಾ ನೋಡ್ತಿಲ್ಲ ಅನ್ನೋ ಕೂಗು ಜೋರಾಗಿದೆ. ಆದರೆ ಒಂದೊಳ್ಳೆ ಸಿನಿಮಾವನ್ನು ಪ್ರೇಕ್ಷಕರು ಯಾವತ್ತು ಕೈಬಿಟ್ಟಿಲ್ಲ. ಅದಕ್ಕೆ ಸದ್ಯದ ಉದಾಹರಣೆ ನೋಡಿದವರು ಏನಂತಾರೆ...