ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಎ ಆರ್ ರೆಹಮಾನ್ ಪುತ್ರಿ “ಖತೀಜಾ”
ಆಸ್ಕರ್ ಪ್ರಶಸ್ತಿ ವಿಜೇತ ಮೂಸಿಕ್ ಡೈರೆಕ್ಟರ್ ಎ ಆರ್ ರೆಹಮಾನ್, ಪುತ್ರಿ ಖತೀಜಾ ರೆಹಮಾನ್ ಅವರ ಮದುವೆಯನ್ನ ಸದ್ದಿಲ್ಲದೇ ಮಾಡಿ ಮುಗಿಸಿದ್ದಾರೆ. ಆಡಿಯೋ ಇಂಜಿನಿಯರ್ ಆಗಿರುವ ವರ ರಿಯಾಸ್ದೀನ್ ಶೇಕ್ ಮೊಹಮ್ಮದ್ ಅವರನ್ನ ಖತೀಜಾ ಕೈ ಹಿಡಿದಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಖತೀಜಾ ರೆಹಮಾನ್ ಅವರು ರಿಯಾಸ್ದೀನ್ ಶೇಖ್ ಮೊಹಮ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿ ಸುದ್ದಿಯನ್ನ ಎ ಆರ್ ರೆಹಮಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘’ನವ ದಂಪತಿಗೆ ದೇವರು ಆಶೀರ್ವದಿಸಲಿ. ನಿಮ್ಮೆಲ್ಲರ ಪ್ರೀತಿ ಮತ್ತು ಶುಭ ಹಾರೈಕೆಗೆ ಧನ್ಯವಾದಗಳು’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಪುತ್ರಿ ಖತೀಜಾ ರೆಹಮಾನ್ ಕೂಡ Instagram ನಲ್ಲಿ ಪತಿ ಮೊಹಮ್ಮದ್ ಜೊತೆಗಿನ ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ನನ್ನ ಜೀವನದಲ್ಲಿ ಬಹು ನಿರೀಕ್ಷಿತ ದಿನ. ನನ್ನ ಹುಡುಗನನ್ನ ಮದುವೆಯಾಗಿದ್ದೇನೆ, ”ಎಂದು 20 ರ ಹರೆಯದ ಖತೀಜಾ ರೆಹಮಾನ್ ಬರೆದುಕೊಂಡಿದ್ದಾರೆ.
ನವ ದಂಪತಿಗೆ ಸಿನಿಪ್ರಿಯರು ಹಾಗೂ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಗಾಯಕಿ ಶ್ರೇಯಾ ಘೋಶಾಲ್, ನಿರ್ಮಾಪಕ ಬೋನಿ ಕಪೂರ್ ಸೇರಿದಂತೆ ಅನೇಕ ತಾರೆಯರು ನವ ದಂಪತಿಗೆ ಶುಭ ಹಾರೈಸಿದ್ದಾರೆ.
ಗಾಯಕಿಯಾಗಿರುವ ಖತೀಜಾ ಡಿಸೆಂಬರ್ 29, 2021 ರಂದು ರಿಯಾಸ್ದೀನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.