ನಿಮಗೆ ಧಮ್ ಇದ್ದರೆ ಅರೆಸ್ಟ್ ಮಾಡಿ : ಗೃಹ ಸಚಿವರಿಗೆ ಡಿಕೆಶಿ ಸವಾಲು DKShivakumar saaksha tv
ಬೆಂಗಳೂರು : ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕನ ಮಗನ ಹೆಸರಿಗೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಧಮ್ ಇದ್ದರೇ ಅರೆಸ್ಟ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಮಗನ ಪಾತ್ರವಿದೆ ಅಂತ ಆರೋಪ ಮಾಡಿದ್ದಾರೆ.
ಬಿಜೆಪಿಯವರಿಗೆ ಧಮ್ ಇದ್ದರೆ ಅದು ಯಾರು ಅಂತ ಹೇಳಲಿ. ಬಿಜೆಪಿಯವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ನ ಯಾವ ಮುಖಂಡರ ಮಗನ ಹೆಸರಿದೆ ಹೇಳಲಿ ಅರೆಸ್ಟ್ ಮಾಡಲಿ ಎಂದು ಗುಡುಗಿದರು.
ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಇಡಿಗೆ ಯಾವ ತನಿಖೆಗೆ ವಹಿಸಿದ್ದಾರೆ ಮಾಹಿತಿ ಜನರ ಮುಂದಿಡಲಿ ಎಂದು ಒತ್ತಾಯಿಸಿದ ಡಿ.ಕೆ.ಶಿವಕುಮಾರ್, ಎಷ್ಟು ಬಿಟ್ ಕಾಯಿನ್ ರಿಕವರಿ ಆಗಿದೆ ಜನರಿಗೆ ತಿಳಿಸಲಿ.
ಕಾಂಗ್ರೆಸ್ ಲೀಡರ್ ಮಗನ ಹೆಸರಿದೆ ಅಂತ ಹೋಮ್ ಮಿನಸ್ಟರ್ ಹೇಳ್ತಾರೆ. ಯಾರೇ ಇದ್ರೂ ಅವರನ್ನು ಅರೆಸ್ಟ್ ಮಾಡಿ ಹಾಗಿದ್ರೆ.
ಧಮ್ ಇದ್ರೆ ಅರೆಸ್ಟ್ ಮಾಡಿಸಿ ಹೋಮ್ ಮಿನಿಸ್ಟರ್. ಎಷ್ಟು ಜನ ಹೆಸರು ಹೊರಬರುತ್ತೆ ಹೋಮ್ ಮಿನಿಸ್ಟರ್ ಗೆ ಗೊತ್ತಿದೆಯಾ?
ಆಫಿಸರ್ಸ್ ಎಷ್ಟು ಜನ ಇದ್ದಾರೆ ಗೊತ್ತಾ? ಏಕೆ ಹೋಮ್ ಮಿನಿಸ್ಟರ್ ಆಫಿಸರ್ಸ್ ರಕ್ಷಣೆ ಮಾಡ್ತಿದ್ದಾರೆ? ಯಾರ್ಯಾರ ಹೆಸರನ್ನು ಮುಚ್ಚಿಡ್ತಿದಿರಾ? ಎಂದು ಪ್ರಶ್ನೆಗಳ ಸುರಿಮಳೆಗೈದರು.