‘ಪುಷ್ಪ 2’ ಸಿನಿಮಾದ ಕಲಾವಿದರು ಶೂಟಿಂಗ್ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಕಲಾವಿದರ ಬಸ್ ಅಪಘಾತವಾಗಿದೆ. ಇದನ್ನು ಕೇಳಿ ನಟ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದ ಸಹ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿ ಮರಳಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಸರ್ಕಾರಿ ಬಸ್ ಗೆ ಕಲಾವಿದರ ಬಸ್ ಡಿಕ್ಕಿ ಹೊಡೆದಿದೆ.
ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೆಟ್ಟು ಹೋಗಿತ್ತು. ಆ ಬಸ್ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ‘ಪುಷ್ಪ 2’ ಸಿನಿಮಾದ ಕಲಾವಿದರನ್ನು ಕರೆದು ತರುತ್ತಿದ್ದ ಬಸ್ನ ಚಾಲಕನಿಗೆ ಕೆಟ್ಟು ನಿಂತಿದ್ದ ಬಸ್ ಕಾಣಿಸಿಲ್ಲ. ಹೀಗಾಗಿ ಡಿಕ್ಕಿ ಹೊಡೆದಿದೆ ಎಂದು ತೆಲುಗು ಮಾಧ್ಯಮದಲ್ಲಿ ವರದಿ ಆಗಿದೆ. ತೆಲಂಗಾಣದ ನೆಲ್ಗೊಂಡ ಜಿಲ್ಲೆಯ ಹೈದರಾಬಾದ್-ವಿಜಯವಾಡ ಹೈವೇಯಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಇದ್ದ ಇಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.