ಶಹಬ್ಬಾಶ್.. ಚೀನಾಗೆ ಮಣ್ಣು ಮುಕ್ಕಿಸಿದ ಭಾರತದ ವನಿತೆಯರು
ಏಷ್ಯನ್ ಕಪ್ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿದೆ.
ಕಂಚಿನ ಪದಕಕ್ಕಾಗಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 2–0 ಗೋಲುಗಳಿಂದ ಚೀನಾವನ್ನು ಮಣಿಸಿದೆ.
ಈ ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್ಗಳಿಂದ ಬಂದಿದ್ದು ವಿಶೇಷ.
13ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಮೊದಲ ಗೋಲು ದಾಖಲಿಸಿದರೆ, 19ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಎರಡನೇ ಗೋಲು ದಾಖಲಿಸಿದರು.
ಫೈನಲ್ನಲ್ಲಿ ಜಪಾನ್ 4-2 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಸೋಲಿಸಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಈವರೆಗೂ 10 ಬಾರಿ ಏಷ್ಯ ಕಪ್ ಟೂರ್ನಿ ನಡೆದಿದ್ದು. ಭಾರತ ತಂಡ (2004, 2017), ಎರಡು ಬಾರಿ ಟ್ರೋಪಿ ಗೆದ್ದಿದೆ.
2 ಬಾರಿ ರನ್ನರ್ ಅಪ್ (1999, 2009) ಆಗಿದ್ದು, ಮೂರು ಬಾರಿ (1993, 2013, 2022) ಮೂರನೇ ರನ್ನರ್ ಅಪ್ ಆಗಿದೆ.