Asia Cup t20 2022 | ಪಾಕಿಸ್ತಾನ ವಿರುದ್ಧ ಸೋತ ಭಾರತ ಮಹಿಳಾ ತಂಡ
ಏಷ್ಯಾಕಪ್ ಸಮರದಲ್ಲಿ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ ಸೋಲು ಕಂಡಿದೆ.
ಸಿಲ್ಹೆಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 13 ರನ್ ಗಳಿಂದ ಸೋಲು ಕಂಡಿದೆ.
ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
ಪಾಕ್ ಪರ ಮುನಿಬಾ ಅಲಿ 17 ರನ್, ಅಮೀನ್ 11 ರನ್, ಮರೂಫ್ 32 ರನ್, ನಿದಾ ದರ್ 56 ರನ್ ಗಳನ್ನು ಬಾರಿಸಿದರು.
ಬೌಲಿಂಗ್ ನಲ್ಲಿ ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್ ಪಡೆದರೇ ಪೂಜಾ ವಸ್ತ್ರಾಕರ್ 2, ರೇಣುಕಾ ಸಿಂಗ್ 1 ವಿಕೆಟ್ ಪಡೆದರು.
ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 124 ರನ್ ಗಳಿಗೆ ಆಲೌಟ್ ಆಯ್ತು.
ಭಾರತದ ಪರ ಮೇಘನಾ 15 ರನ್, ಸ್ಮೃತಿ ಮಂದಾನ 17 ರನ್, ದಯಾಲಾನ್ ಹೇಮಲತಾ 20 ರನ್, ದೀಪ್ತಿ ಶರ್ಮಾ 16, ಹರ್ಮನ್ ಪ್ರಿತ್ ಕೌರ್ 12 ರನ್, ರಿಚಾ ಘೋಷ್ 26 ರನ್ ಗಳಿಸಿದರು.