ಏಷ್ಯನ್ ಗೇಮ್ಸ್ ಹಿನ್ನೆಲೆಯಲ್ಲಿ ಬಿಸಿಸಿಐ ಪುರುಷ-ಮಹಿಳಾ ತಂಡಗಳನ್ನು ಪ್ರಕಟಿಸಿದೆ.
ಸೆಪ್ಟೆಂಬರ್ 23ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ಗೆ (Asian Games) ಋತುರಾಜ್ ಗಾಯಕ್ವಾಡ್ (Ruturaj Gaikwad) ನೇತೃತ್ವದ ಪುರುಷ ತಂಡ ಹಾಗೂ ಹರ್ಮನ್ ಪ್ರೀತ್ ಕೌರ್ (Harmanpreet Kaur) ನೇತೃತ್ವದ ಪರಿಷ್ಕೃತ ಮಹಿಳಾ ತಂಡ ಪ್ರಕಟಿಸಲಾಗಿದೆ.
ಕ್ರೀಡಾಕೂಟದಲ್ಲಿ ಪುರುಷ-ಮಹಿಳಾ ಎರಡೂ ತಂಡಗಳು ಭಾಗವಹಿಸುತ್ತಿದ್ದು, ತಂಡದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಈ ಮೊದಲು ಪುರುಷರ ತಂಡದಲ್ಲಿ ಸ್ಥಾನ ಪಡೆದಿದ್ದ ಯುವ ವೇಗಿ ಶಿವಂ ಮಾವಿ (Shivam Mavi) ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಆಕಾಶ್ ದೀಪ್ಗೆ (Aakash Deep) ಅವಕಾಶ ನೀಡಲಾಗಿದೆ. ಮಹಿಳಾ ತಂಡದಲ್ಲಿ ಅಂಜಲಿ ಸರ್ವಾಣಿ (Anjali Sarvani) ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.
19ನೇ ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಆಟವು ಸೆಪ್ಟೆಂಬರ್ 28ರಿಂದ ಆರಂಭವಾಗಲಿದೆ. ಭಾರತದ ಪುರುಷರ ತಂಡದ ಅಭಿಯಾನ ಅಕ್ಟೋಬರ್ 3ರಿಂದ ಶುರುವಾಗಲಿದೆ. ಮಹಿಳಾ ತಂಡದ ಅಭಿಯಾನ ಸೆಪ್ಟೆಂಬರ್ 21ರಿಂದ ಆರಂಭವಾಗಲಿದೆ. ಉಭಯ ತಂಡಗಳು ಪದಾರ್ಪಣೆ ಮಾಡಿದ ಚೊಚ್ಚಲ ಟೂರ್ನಿಯಲ್ಲಿಯೇ ಚಿನ್ನ ಗೆಲ್ಲುವ ವಿಶ್ವಾಸದಲ್ಲಿವೆ.
ಭಾರತ ಪುರುಷರ ಪರಿಷ್ಕೃತ ತಂಡದಲ್ಲಿ ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಪ್ರಭಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಆಕಾಶ್ ದೀಪ್, ಮುಕೇಶ್ ಕುಮಾರ್ ಹಾಗೂ ಮೀಸಲು ಆಟಗಾರರಾಗಿ ದೀಪಕ್ ಹೂಡಾ, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ಸಾಯಿ ಸುದರ್ಶನ್, ಯಶ್ ಠಾಕೂರ್ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ತಂಡದಲ್ಲಿ ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಟಿಟಾಸ್ ಸಾಧು, ಅಮನ್ ಜೋತ್ ಕೌರ್, ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆತುಜಾ, ಅನುಷಾ ಬಾರೆಡ್ಡಿ ಹಾಗೂ ಮೀಸಲು ಆಟಗಾರರಾಗಿ ಸ್ನೇಹ್ ರಾಣಾ, ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸೈಕಾ ಇಶಾಕ್ ಸ್ಥಾನ ಪಡೆದಿದ್ದಾರೆ.