Assam couple – ಮದುವೆಯ ದಿನ ವಿಭಿನ್ನ ಒಪ್ಪಂದ – ಕರಾರು ಪತ್ರದಲ್ಲಿ ವಿಶೇಷ ಷರತ್ತು…
ಮದುವೆ ಕ್ಷಣಗಳನ್ನ ವಿಶೇಷವಾಗಿಸಲು ನೂತನ ಜೋಡಿಗಳು ಹಲವು ಪ್ರಯತ್ನಗಳನ್ನ ಮಾಡುತ್ತಲೇ ಇರುತ್ತಾರೆ, ವಿಭಿನ್ನ ರೀತಿಯ ಮದುವೆಗಳಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಇತ್ತೀಚೆಗೆ ಮದುವೆಗಳು ಸಾಂಪ್ರದಾಯಿಕ ಆಚರಣೆಗಳಿಗಿಂತ ವ್ಯವಹಾರಿಕ ಒಪ್ಪಂದಗಳಾಗುತ್ತಿವೆ.
ಇದೀಗ ಆಸ್ಸಾಂನಲ್ಲಿ ನಡೆದ ಮದುವೆಯೊಂದು ಇಂಥದ್ದೇ ಕಾರಣಕ್ಕೆ ಸುದ್ದಿಯಾಗಿದೆ, ಮದುವೆ ನಂತರ ಏನು ಮಾಡಬೇಕು ಏನೂ ಮಾಡಬಾರದು ಎನ್ನುವುದನ್ನ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆ ನವ ಜೋಡಿಗಳಾದ ಶಾಂತಿ ಮತ್ತು ಮಿಂಟು ಸಹಿ ಹಾಕಿದ್ದಾರೆ.
ವೆಡ್ಲಾಕ್ ಫೋಟೋಗ್ರಾಫಿ ಎಂಬ ಇನ್ಸ್ಟ್ರಾಗ್ರಾಂ ಪೇಜ್ ಹಂಚಿಕೊಂಡಿರುವ ವೀಡಿಯೋದಲ್ಲಿ ನವ ಜೋಡಿ ಮದುವೆ ನಂತರ ಒಪ್ಪಂದ ಪತ್ರಕ್ಕೆ ಸಹಿ ಹಾಕುವುದನ್ನ ನೋಡಬಹುದು.
ಒಪ್ಪಂದದ ಪ್ರಕಾರ, ಪ್ರತಿ ತಿಂಗಳಿಗೆ ಒಂದು ಪಿಜ್ಜಾ ಮಾತ್ರ. ಮನೆಯ ಊಟಕ್ಕೆ ಯಾವಾಗಾಲೂ ಯೆಸ್ ಹೇಳಬೇಕು. ವಧು ಪ್ರತಿದಿನ ಸೀರೆ ಉಡಬೇಕು. ರಾತ್ರಿ ಪಾರ್ಟಿಗೆ ಒಪ್ಪಿಗೆ ಇದೆ ಆದ್ರೆ ಸಂಗಾತಿ ಜೊತೆ ಮಾತ್ರ. ಭಾನುವಾರದ ಬೆಳಗಿನ ಉಪಹಾರ ನೀವು ಮಾಡಬೇಕು. ಪ್ರತಿದಿನ ಜಿಮ್ ಗೆ ಹೋಗಬೇಕು ಪ್ರತಿ ಹದಿನೈದು ದಿನಗಳಿಗೊಮ್ಮೆ ಶಾಪಿಂಗ್ ಕರೆದುಕೊಂಡು ಹೋಗಬೇಕು. ಪ್ರತಿ ಪಾರ್ಟಿಯಲ್ಲಿ ಉತ್ತಮ ಪೋಟೋ ಕ್ಲಿಕ್ ಮಾಡಬೇಕು ಸೇರಿದಂತೆ ಹಲವು ಷರತ್ತುಗಳನ್ನ ವಿಧಿಸಲಾಗಿದೆ.