ಅಸ್ಸಾಂ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ಶಸ್ತ್ರಾಸ್ತ್ರ ಪರವಾನಗಿ (Gun License) ನೀಡಲು ರಾಜ್ಯ ಕ್ಯಾಬಿನೆಟ್ ಸಮ್ಮತಿ ನೀಡಿದೆ. ಈ ನಿರ್ಧಾರವು ರಾಜ್ಯದ ಜನರ ಭದ್ರತೆಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳಲಾಗಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರ ಸುರಕ್ಷತೆ ಮುಂದಿಟ್ಟುಕೊಂಡ ತೀರ್ಮಾನ
ರಾಜ್ಯದ ಕೆಲ ಭಾಗಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಜನತೆ ತಮ್ಮ ಜೀವ ಮತ್ತು ಆಸ್ತಿ ರಕ್ಷಣೆಯ ಹಿನ್ನಲೆಯಲ್ಲಿ ಆತಂಕದಲ್ಲಿದ್ದಾರೆ ಎಂಬುದು ಸರ್ಕಾರದ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡುವ ಮೂಲಕ, ತಮ್ಮ ರಕ್ಷಣೆಗೆ ಸ್ವತಃ ಸಜ್ಜು ಆಗುವ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸುವಲ್ಲಿ ನಿಗದಿತ ನಿಯಮಗಳು
ಆಯುಧ ಪರವಾನಗಿ ನೀಡುವಲ್ಲಿ ಕಠಿಣ ನಿಯಮಗಳು ಪಾಲನೆಯಾಗಲಿದ್ದು, ಯಾರಿಗೂ ಸುಲಭವಾಗಿ ಲೈಸೆನ್ಸ್ ಸಿಗಲ್ಲ. ಅರ್ಜಿ ಪರಿಶೀಲನೆ, ಪೊಲೀಸ್ ವರದಿ, ಹಾಗೂ ಐಡಿಯಾ ಶೋಧನೆ ಸೇರಿದಂತೆ ಹಲವು ಹಂತಗಳಲ್ಲಿ ಪರಿಶೀಲನೆ ನಡೆಸಿ ಮಾತ್ರ ಪರವಾನಗಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"435250766003211","type":"ugc"},{"id":"240045996045212","type":"ugc"},{"id":"289170894054211","type":"ugc"},{"id":"454202938023211","type":"ugc"},{"id":"323145150235211","type":"ugc"}]}}](https://saakshatv.com/wp-content/uploads/2025/05/Picsart_25-05-28_22-05-06-536-750x500.jpg)







