ಗುಂಡಿನ ಚಕಮಕಿ : 7 ಉಗ್ರರನ್ನು ಸದೆಬಡಿದ ಭದ್ರತಾ ಪಡೆ

1 min read
Assam

ಗುಂಡಿನ ಚಕಮಕಿ : 7 ಉಗ್ರರನ್ನು ಸದೆಬಡಿದ ಭದ್ರತಾ ಪಡೆ

ದಿಸ್ಪುರ್ : ಅಸ್ಸಾಂ ನಾಗಲ್ಯಾಂಡ್ ಗಡಿಯ ವೆಸ್ಟ್ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ 7 ಜನ ನ್ಯಾಷನಲ್ ಲಿಬರ್ಟಿ ಆರ್ಮಿ ಉಗ್ರರು ಹತರಾಗಿದ್ದಾರೆ.

ಸ್ಥಳದಲ್ಲಿ ನಾಲ್ಕು ಎಕೆ-47 ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Assam

ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಇನ್ನೂ ಕೆಲ ಉಗ್ರರು ಸ್ಥಳದಲ್ಲಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ.

ವೆಸ್ಟ್ ಕರ್ಬಿ ಆಂಗ್ಲಾಂಗ್ ಎಎಸ್‍ಪಿ ಪ್ರಕಾಶ್ ಸೋನೋವಾಲ್ ನೇತೃತ್ವದಲ್ಲಿ ಅಸ್ಸಾಂ ರೈಫಲ್ಸ್ ಪರಸನಲ್ ಹಾಗೂ ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd