ಹಾಸನ ಜೆಡಿಎಸ್ ಮುಖಂಡನ ಬರ್ಬರ ಕೊಲೆ – ನಗರದಲ್ಲಿ ಪೊಲೀಸ್ ಸರ್ಪಗಾವಲು
1 min read
ಹಾಸನ ಜೆಡಿಎಸ್ ಮುಖಂಡನ ಬರ್ಬರ ಕೊಲೆ – ನಗರದಲ್ಲಿ ಪೊಲೀಸ್ ಸರ್ಪಗಾವಲು
ಹಾಸನದಲ್ಲಿ ಜೆಡಿಎಸ್ ಮುಖಂಡ, ನಗರಸಭೆ ಸದಸ್ಯನ ಭೀಕರ ಹತ್ಯೆಯಾಗಿದ್ದು, ಹಂತಕರು ಅಟ್ಟಾಡಿಸಿ ಕೊಂದಿದ್ದಾರೆ. ಹತ್ಯೆಯಿಂದ ಹಾಸನದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಕೃತ್ಯವೆಸಗಿದ್ದಾರೆ. ಪ್ರಶಾಂತ್ ಹಾಸನ ನಗರ 16ನೇ ವಾರ್ಡ್ ಸದಸ್ಯನಾಗಿದ್ದರು. ಪ್ರಕಾಶ್ ನಿನ್ನೆ ಸಂಜೆ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ನಗರದ ಲಕ್ಣ್ಮಿಪುರ ಬಡಾವಣೆಯಲ್ಲಿ ಹಂತಕರು ಬೈಕ್ನಲ್ಲಿ ತೆರಳುವ ವೇಳೆ ಹಿಂಬಾಲಿಸಿ, ಅಟ್ಟಾಡಿಸಿ ಕೊಂದಿದ್ದಾರೆ.
ನಗರಸಭೆ 16ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಸುಮಾರು 1,700 ಮತಗಳ ಅಂತರದಿಂದ ಪ್ರಶಾಂತ್ ಗೆದಿದ್ದರು. ಈ ಬಗ್ಗೆ ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸರಿಂದ ಕೇಸ್ ದಾಖಲು ಮಾಡಲಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭೇಟಿ ನೀಡಿ, ಹಂತಕರನ್ನು ಕೂಡಲೇ ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ. ಹಾಸನ ನಗರದಲ್ಲಿ ರೌಡಿಸಂ ಹೆಚ್ಚಾಗ್ತಿದೆ, ಪೊಲೀಸರ ಸಪೋರ್ಟ್ ಇದೆ. ಹಾಸನ ಗೂಂಡಾ ಜಿಲ್ಲೆಯಾಗಲು ಪೊಲೀಸರೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಆರ್.ಶ್ರೀನಿವಾಸ್ಗೌಡ, ಹೆಚ್ಚುವರಿ ಎಸ್ಪಿ ಡಾ.ಬಿ.ಎನ್.ನಂದಿನಿ, ಪೆನ್ಶೆನ್ ಮೊಹಲ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.