ಪುಣೆ: ನಡುರಸ್ತೆಯಲ್ಲಿ ಪತ್ನಿಯ ಮೇಲೆ ನೋಟು ಎಸೆದು, ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
5 ಜನರ ಗ್ಯಾಂಗ್ ಮಹಿಳೆಯ ಪತಿಯನ್ನೇ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪತಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಮಹಾಲುಂಗೆಯಲ್ಲಿ ಈ ದುರಂತ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮಹಾಲುಂಗೆಯ ಸಾಯಿ ಅಮೃತ್ ಲಾಡ್ಜ್ ಬಳಿ ಆಗಸ್ಟ್ 20ರಂದು ರಾತ್ರಿ ಈ ಘಟನೆ ನಡೆದಿದೆ.
23 ವರ್ಷದ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಮಹಿಳೆ ಮತ್ತು ಆಕೆಯ ಪತಿ ತಮ್ಮ ಮಕ್ಕಳೊಂದಿಗೆ ರಾತ್ರಿ ಊಟ ಮಾಡಲು ಜೈದೀಪ್ ಹೋಟೆಲ್ಗೆ ಹೋಗಿದ್ದರು. ಈ ಸಮಯದಲ್ಲಿ ಹೋಟೆಲ್ ಒಳಗೆ ಆಕೆಯ ಪತಿ ಬಿಲ್ ಪಾವತಿಸುತ್ತಿರುವಾಗ ಗುಂಪೊಂದು ಹೊರಗೆ ನಿಂತಿದ್ದ ಆತನ ಹೆಂಡತಿಯ ಮೇಲೆ ನೋಟ್ ಎಸೆದು ಅಸಭ್ಯವಾಗಿ ವರ್ತಿಸಿದೆ. ಇದನ್ನು ಆತ ಪ್ರಶ್ನಿಸಿದಾಗ ಹಲ್ಲೆ ಮಾಡಿದ್ದಾರೆ. ಆಗ ಮಹಿಳೆಯ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.