ADVERTISEMENT
Saturday, July 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಭಾರತದ ಕರಡಿ ಪ್ರಬೇಧಗಳ ಕುರಿತಾದ ವಿಸ್ಮಯಕಾರಿ ವೈವಿಧ್ಯಮಯ ವಿಚಾರಗಳು

Naveen Kumar B C by Naveen Kumar B C
December 18, 2021
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

 

ಭಾರತದ ಕರಡಿ ಪ್ರಬೇಧಗಳ ಕುರಿತಾದ ವಿಸ್ಮಯಕಾರಿ ವೈವಿಧ್ಯಮಯ ವಿಚಾರಗಳು

Related posts

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

July 12, 2025
ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

July 12, 2025

ಕರಡಿಗಳು ಮೂಲತಃ ನಾಯಿ ಕುಟುಂಬದ ದೂರದ ಸಂಬಂಧಿಗಳು ಎನ್ನುತ್ತಾರೆ,ಇವುಗಳನ್ನು Ursidae ಕುಟುಂಬಕ್ಕೆ ಸೇರಿಸಲಾಗಿದೆ. ಕರಡಿಗಳು ಅನೇಕಬಗೆಯಪರಿಸರಕ್ಕೆ ಹೊಂದಿಕೊಂಡು ಪ್ರಪಂಚದಾದ್ಯಂತನೆಲೆಸಿವೆ.ಅತೀ ಶೀತ ಆರ್ಕಟಿಕ್ವಲಯದಲ್ಲಿ ಭೂಮಿ ಮೇಲಿನ ಅತೀ ದೊಡ್ಡ ಮಾಂಸಹಾರಿ ಪ್ರಾಣಿದೃವ ಕರಡಿ ವಾಸಿಸಿದರೆ, ಉಷ್ಣವಲಯದಲ್ಲಿ ವಿವಿಧ ಜಾತಿ ಕರಡಿಗಳು ವಾಸಿಸುತ್ತಿವೆ.ಆದರೆ ಅಚ್ಚರಿ ಎನ್ನುವಂತೆ ಆಫ್ರಿಕಾ ಹಾಗು ಆಸ್ಟ್ರೇಲಿಯಾದ ಕಾಡುಗಳಲ್ಲಿ ಕರಡಿಗಳು ಇಲ್ಲ. ಕರಡಿಗಳಂತೆ ಪಾಂಡಾಗಳು ಕಂಡು ಬಂದರೂ ಇವುಗಳನ್ನು ಬೇರೆ ಕುಟುಂಬಕ್ಕೆ ಸೇರಿಸಲಾಗಿದೆ.

 

ಕರಡಿಗಳಸಾಮಾನ್ಯ ಲಕ್ಷಣಗಳು:ಹಿಮ ಕರಡಿ ಹೊರತುಪಡಿಸಿದರೆಉಳಿದವುಮಿಶ್ರಹಾರಿಗಳು.ಇವುಗಳಿಗೆ ಮಾಂಸವನ್ನು ಹರಿಯಬಲ್ಲಕಾರ್ನೇಸಿಯಲ್ಹಲ್ಲುಗಳಿಲ್ಲ. ಇವಕ್ಕೆಬಾಲವಿಲ್ಲ, ಇದ್ದರೂ ಅತೀ ಚಿಕ್ಕದು.ನೆಲಕ್ಕೆ ಮನುಷ್ಯರಂತೆ ಪೂರ್ಣ ಊರುವಪಾದಗಳಿವೆ.ಹೆಜ್ಜೆಗಳುಮನುಷ್ಯರಂತೆ ಕಂಡರೂ ಮುಂದಿರುವಉಗುರಿನ ಗುರುತು ಬೀಳುವುದರಿಂದ ವ್ಯತ್ಯಾಸ ತಿಳಿಯಬಹುದು.ಪ್ರತಿ ಪಾದದ ಬೆರಳುಗಳಿಗೆ ಉದ್ದವಾದ ಬಾಗಿದ ಮೊನಚಾದನಖಗಳಿವೆ.ಮೂಗು ಮತ್ತು ಕಿವಿ ತುಂಬಾ ಚುರುಕುಮತ್ತು ಕಣ್ಣು ಮಂದ.ಕೆಲ ಜಾತಿಯ, ಕರಡಿಗಳು ಮರ ಏರುತ್ತವೆ.ಹಿಂಗಾಲುಗಳ ಮೇಲೆ ನಿಂತು ಕೆಲ ಹೆಜ್ಜೆ ನಡೆಯಬಲ್ಲವು. ಜೇನು, ಗೆದ್ದಲು, ಹಣ್ಣು, ಮೀನು, ಇರುವೆಗಳನ್ನುಇವುತಿನ್ನುತ್ತವೆ. ಶೀತ ವಲಯದ ಕರಡಿಗಳು ಚಳಿಗಾಲದಲ್ಲಿ ಶಿಶಿರ ನಿದ್ರೆ ಮಾಡುತ್ತವೆ.ಉಷ್ಣವಲಯದ ಕರಡಿಗಳು ಶಿಶಿರನಿದ್ರೆ ಮಾಡುವುದಿಲ್ಲ.ಆದರೆಹುಟ್ಟುವ ಮರಿಗಳು ಕೂದಲ್ಲಿಲ್ಲದೆ, ಕುರುಡಾಗಿಹುಟ್ಟುತ್ತವೆ.

ನಮ್ಮ ದೇಶದಲ್ಲಿ 4 ಬಗೆಯ ಕರಡಿಗಳನ್ನುಗುರುತಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ಸ್ಲಾಥ್ ಕರಡಿ ಮಾತ್ರ ಕಂಡು ಬರುತ್ತದೆ.

1)ಸ್ಲಾತ್‌ ಕರಡಿಗಳು (SLOTH BEAR):

ನಮ್ಮಲ್ಲಿರುವ ಕರಡಿಗೆ Sloth bear ಎಂದು ಹೆಸರು, ಈ Sloth bear ಅರ್ಥ ಹುಡುಕಿದರೆ ಎಲ್ಲಾ ಕಡೆ ಇದು ಸೋಮಾರಿ ಕರಡಿ ಎಂಬ ಮಾಹಿತಿ ಸಿಗುತ್ತದೆ, ಇವುದೀರ್ಘ ನಿದ್ರೆ ಮಾಡುತ್ತವೆ.ಅದನ್ನು ಬಿಟ್ಟರೆ ಸೋಮಾರಿಯ ಯಾವ ಲಕ್ಷಣಗಳು ಈ ಕರಡಿಯಲ್ಲಿಲ್ಲ. ಆದರೂ ಈ ಕರಡಿಗೆ Sloth bear ಹೆಸರು ಬರಲು ಬೇರೆ ಕಾರಣವೇ ಇರಬೇಕು. 18ನೇ ಶತಮಾನದ ಅಂತ್ಯದಲ್ಲಿ ವೈಜ್ಞಾನಿಕ ಪರಿಶೀಲನೆಗಾಗಿ ಕಳುಹಿಸಿದ ಈ ಕರಡಿಯಚರ್ಮವು ದಕ್ಷಿಣ ಅಮೆರಿಕಾದಸ್ಲಾಥ್ಪ್ರಾಣಿಯಂತೆಕಂಡಿದ್ದರಿಂದSloth bear ಎಂಬ ಹೆಸರು ಬಂದಿರಬಹುದೆಂಬಊಹೆಯಿದೆ.ಮುಂದೆ 1810ರಲ್ಲಿ ಜೀವಂತ ಕರಡಿಯನ್ನುಪ್ಯಾರಿಸ್‌ಗೆ ಒಯ್ದ ನಂತರ ಇದು ಕರಡಿ ಎಂದು ತೀರ್ಮಾನಿಸಲಾಯಿತು.ಆದರೆ ಮೊದಲಿನ ಸ್ಲಾಥ್ ಹಾಗೆ ಉಳಿದುಕೊಂಡಿದೆ.

ಎತ್ತರ 65-85 ಸೆಂಟಿಮೀಟರ್.ಎರಡು ಕಾಲಲ್ಲಿ ಎದ್ದು ನಿಂತರೆ ಆರಡಿ ಮನುಷ್ಯನಷ್ಟು ಎತ್ತರ.ಗಂಡು 130-145 ಕಿಲೋ, ಹೆಣ್ಣು 70-80 ಕಿಲೋತೂಗುತ್ತವೆ. ಕಪ್ಪು ಬಣ್ಣದ ಒರಟು ಕೂದಲು, ದಪ್ಪವಾದ ಚಲಿಸುವ ತುಟಿಗಳು, ಕಾಲಲ್ಲಿ ಉದ್ದವಾದ ಬಿಳಿ ನಖಗಳು, ಎದೆ ಮೇಲೆ ಬಿಳಿ ಚಂದ್ರಾಕೃತಿ ಇದೆ.ಗೆದ್ದಲು ಹುತ್ತ ಇರುವೆ ಗೂಡುಗಳನ್ನುಒಡೆದು ಮುಸುಡಿ ಒಳಸೇರಿಸಿ ಮಣ್ಣನ್ನು ಊದಿ ದೀರ್ಘ ಶ್ವಾಸದಿಂದ ಹುಳುಗಳನ್ನುಹಿಂದೆಳೆದು ತಿನ್ನುತ್ತದೆ. ಇವುಗಳ ಮಲವನ್ನು ಪರೀಕ್ಷಿಸಿದರೆ ಇರುವೆಗಳೇ ಹೆಚ್ಚು ಕಂಡುಬರುತ್ತವೆ. ಇವುಗೆಡ್ಡೆ ಗೆಣಸು, ಹಣ್ಣುಗಳು, ಗೆದ್ದಲು, ಇರುವೆಗಳನ್ನುತಿನ್ನುತ್ತವೆ.ಕೆಲವು ಸಲ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತವೆ. ಇವುಮರ ಏರುತ್ತವೆ, ಇಳಿಯುವಾಗ ಹಿಂದಿನಿಂದ ಜಾರುತ್ತವೆ. ಹೆಚ್ಚಾಗಿ ರಾತ್ರಿ ಸಂಚಾರಿ.1-2 ಮರಿಗಳನ್ನುಹಾಕುತ್ತವೆ, ಆಹಾರಕ್ಕಾಗಿ ಅಲೆಯುವಾಗ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಳ್ಳುತ್ತವೆ.ದೀರ್ಘನಿದ್ರೆ ಮಾಡಬಲ್ಲವು. ಪಾದಗಳನ್ನು ನೆಕ್ಕುವ ಅಭ್ಯಾಸವಿದೆ. ಎಲ್ಲ ಪರಿಸರಕ್ಕೂ ಹೊಂದಿಕೊಂಡಿವೆ, ಬಯಲು ಸೀಮೆ,ಒಣ ಕಾಡು, ಎಲೆ ಉದುರುವ ಕಾಡು, ಪಶ್ಚಿಮ ಘಟ್ಟಗಳದಟ್ಟಡವಿಯಲ್ಲಿಯೂಕರಡಿಗಳನ್ನು ನೋಡಬಹುದು. ಶ್ರೀಲಂಕಾ,ಭೂತಾನ್, ನೇಪಾಳಗಳಲ್ಲಿಯೂ ಕಾಣಿಸುತ್ತದೆ. ನಮ್ಮ ರಾಜ್ಯದಲ್ಲಿಬಳ್ಳಾರಿಯ ದರೋಜಿ ಕರಡಿ ಧಾಮ ಪ್ರಸಿದ್ಧ ಕರಡಿ ಧಾಮ.ಇವು ಸಾಧು ಪ್ರಾಣಿಯಂತೆ ಕಂಡರೂ ಕೆಲವು ಸಲ ಉಗ್ರವಾಗಿವರ್ತಿಸುತ್ತದೆ.ಇದರ ಕಣ್ಣುಗಳು ಸ್ವಲ್ಪ ಮಂದವಿರುವುದರಿಂದ ಅಕಸ್ಮತ್ತಾಗಿ ಹತ್ತಿರ ಹೋದವರ ಅರಿವಾಗದೆ ಗಲಿಬಿಲಿಗೊಂಡು ಮನುಷ್ಯನ ಮೇಲೆರಗಿ,ಮುಖದ ಭಾಗವನ್ನೇ ಕಚ್ಚಿ ಹರಿಯುತ್ತವೆ.ಹೊಲ ಗದ್ದೆಗಳಲ್ಲಿ ಕರಡಿ ಕಂಡಾಗ ಸಮೀಪ ಹೋಗದೆ ದೂರದಿಂದಲೇ ಕೂಗಿ ಹೆದರಿಸುವುದು ಒಳ್ಳೆಯದು,ಇವುಗಳನ್ನು ಪಳಗಿಸಬಹುದು.

 

2)ಹಿಮಾಲಯದಕಂದುಕರಡಿ (HIMALAYAN BROWN BEAR):

ಹಿಮಾಲಯದ ಕಂದು ಕರಡಿ ಇದು ನಮ್ಮ ದೇಶದಲ್ಲಿ ಕಂಡುಬರುವಕರಡಿಗಳಲ್ಲಿ ಅತೀ ದೊಡ್ಡದು. ಗಂಡಿನ ತೂಕ ಸುಮಾರು 250 ಕೆಜಿ.ಗರಿಷ್ಠ ಸಸ್ಯಾಹಾರಿಯಾದರೂ, ದಂಶಕ, ಮೀನು,ಹುಳು, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. 1-2 ಮರಿಗಳನ್ನುಹಾಕುತ್ತವೆ, ಕೆಲವು ತಿಂಗಳುಗಳ ಕಾಲ ಶಿಶಿರ ನಿದ್ರೆ ಮಾಡುತ್ತವೆ.ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಲಡಾಕ್, ಉತ್ತರಖಾಂಡ್, ಹಾಗೂಟಿಬೆಟ್, ಪಾಕಿಸ್ತಾನ ಹಾಗು ನೇಪಾಳದಲ್ಲಿಕಾಣುತ್ತವೆ.

 

3)ಹಿಮಾಲಯದ ಕಪ್ಪು ಕರಡಿ (HIMALAYAN BLACK BEAR):

ಎದೆಯ ಮೇಲೆ ಅರ್ದಚಂದ್ರಾಕೃತಿ ಇರುವುದರಿಂದ ಮೂನ್ ಬೇರ್ ಅಂತಲೂ ಕರೆಯುತ್ತಾರೆ. ತೂಕ 90-115, ಹೆಚ್ಚಾಗಿ ಮಾಂಸಾಹಾರಿಗಳು, ಚನ್ನಾಗಿಈಜಬಲ್ಲವು.ಹಿಮಾಲಯ, ಭೂತಾನ್,ಚೀನಾ, ನೇಪಾಳ ಪಾಕಿಸ್ತಾನಗಳಲ್ಲಿಹೆಚ್ಚಾಗಿಕಾಣಿಸುತ್ತವೆ

 

4)ಮಲಯದ ಸೂರ್ಯ ಕರಡಿ (MALAYAN SUN BEAR):

ಎದೆಯ ಮೇಲೆ ಸೂರ್ಯ ಉದಯಿಸುವಹೊಂಬಣ್ಣದ ಅರ್ಧ ಚಂದ್ರಾಕೃತಿ ಇರುವುದರಿಂದ ಸೂರ್ಯ ಕರಡಿ ಎನ್ನುತ್ತಾರೆ. ನಮ್ಮ ದೇಶದಲ್ಲಿ ಕಂಡು ಬರುವ ಕರಡಿಗಳಲ್ಲಿ ಅತೀ ಚಿಕ್ಕದು. 25-65 ಕೆಜಿತೂಗುತ್ತವೆ.ದುಂಡನೆಯ ಚಿಕ್ಕ ಕಿವಿ ಹೊಂದಿವೆ, ಸ್ಲಾಥ್ಕರಡಿಯಂತೆ ಆಹಾರ ಕ್ರಮವಿದೆ.ಈಶಾನ್ಯ ಭಾರತದ ಪರ್ವತಗಳಿಂದ, ಸುಮತ್ರಾ, ಬೋರ್ನಿಯಾವರೆಗೆವಿತರಣೆಗೊಂಡಿವೆ.ಕರಡಿಗಳಪಿತ್ತಕೋಶದಿಂದ (Gallbladder) ವಿವಿಧ ಔಷದತಯಾರಿಸಲು ಹಾಗುಚರ್ಮಕ್ಕಾಗಿ ಇವುಗಳ ಹತ್ಯೆ ಮಾಡಲಾಗುತ್ತಿದೆ, ಆವಾಸ ನಾಶವೂ ಇವುಗಳನ್ನು ಅಪಾಯಕ್ಕೆ ಸಿಲುಕಿಸಿವೆ,ಕರಡಿಗಳೆಲ್ಲವೂವನ್ಯಜೀವಿಸಂರಕ್ಷಣಾಕಾಯ್ದೆಯಡಿರಕ್ಷಣೆಗೊಳಪಟ್ಟಿವೆ.

-ನಾಗರಾಜ್ಬೆಳ್ಳೂರು, ಪರಿಸರಮತ್ತುವನ್ಯಜೀವಿಬರಹಗಾರ

ನಿಸರ್ಗ ಕನ್ಜರ್ವೇಶನ್ ಟ್ರಸ್ಟ್

  • ಕೃಪೆ ಹಿಂದವಿ ಸ್ವರಾಜ್
ShareTweetSendShare
Join us on:

Related Posts

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

by Shwetha
July 12, 2025
0

KRCL Technicians Recruitment 2025 : ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಟೆಕ್ನಿಷಿಯನ್ಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ....

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

by Shwetha
July 12, 2025
0

ಬೆಂಗಳೂರು: ರಾಜ್ಯದ ರೈತ ಸಮುದಾಯಕ್ಕೆ ಸರ್ಕಾರದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಇನ್ನು ಮುಂದೆ ರೈತರ ಪಹಣಿ (RTC) ನೋಂದಣಿ ಪ್ರಕ್ರಿಯೆಯು ಅವರ ವಾರಸುದಾರರ ಹೆಸರಿಗೆ ಸುಲಭವಾಗಿ ಮತ್ತು ನೇರವಾಗಿ...

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು – ಇಲ್ಲದಿದ್ದರೆ ನಾಟಕ ಮುಂದುವರೆಯುತ್ತದೆ: ಬೊಮ್ಮಾಯಿ

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು – ಇಲ್ಲದಿದ್ದರೆ ನಾಟಕ ಮುಂದುವರೆಯುತ್ತದೆ: ಬೊಮ್ಮಾಯಿ

by Shwetha
July 12, 2025
0

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿಬರುತ್ತಿರುವ ಚರ್ಚೆಗಳ ನಡುವೆ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಹೈಕಮಾಂಡ್‌ ಅನ್ನು ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರು...

ಪಕ್ಷವೇ ನನ್ನ ಶಕ್ತಿ – ಮಲ್ಲಿಕಾರ್ಜುನ ಖರ್ಗೆ ಅವರ ದೀಕ್ಷೆ ಪಾಲಿಸುತ್ತೇನೆ: ಡಿಕೆ ಶಿವಕುಮಾರ್ ಸ್ಪಷ್ಟನೆ

ಪಕ್ಷವೇ ನನ್ನ ಶಕ್ತಿ – ಮಲ್ಲಿಕಾರ್ಜುನ ಖರ್ಗೆ ಅವರ ದೀಕ್ಷೆ ಪಾಲಿಸುತ್ತೇನೆ: ಡಿಕೆ ಶಿವಕುಮಾರ್ ಸ್ಪಷ್ಟನೆ

by Shwetha
July 12, 2025
0

ರಾಜ್ಯದ ಡಿಸಿಎಂ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಮೇಲೆ ತಾವು ಸಂಪೂರ್ಣವಾಗಿ ನಿಷ್ಠಾವಂತರಾಗಿರುವುದನ್ನು ಪುನರುಚ್ಚರಿಸಿದ್ದಾರೆ. ಪಕ್ಷವಿದ್ದರೆ ತಾನೇ ನಾನು. ಪಕ್ಷವೇ ಇಲ್ಲದಿದ್ದರೆ ನಾನಿಲ್ಲ...

135 ಸೀಟುಗಳನ್ನು ಗೆಲ್ಲಿಸಿ ರಾಜ್ಯದ ಅಧಿಕಾರಕ್ಕೆ ಬಂದರೂ ಸುಸ್ಥಿರ ಆಡಳಿತ ನೀಡಲು ವಿಫಲವಾಗಿರುವ ಕಾಂಗ್ರೆಸ್ – ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು: ಆರ್. ಅಶೋಕ್ ಕಿಡಿ

135 ಸೀಟುಗಳನ್ನು ಗೆಲ್ಲಿಸಿ ರಾಜ್ಯದ ಅಧಿಕಾರಕ್ಕೆ ಬಂದರೂ ಸುಸ್ಥಿರ ಆಡಳಿತ ನೀಡಲು ವಿಫಲವಾಗಿರುವ ಕಾಂಗ್ರೆಸ್ – ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು: ಆರ್. ಅಶೋಕ್ ಕಿಡಿ

by Shwetha
July 12, 2025
0

ರಾಜ್ಯದಲ್ಲಿ 135 ಸೀಟುಗಳ ಭರ್ಜರಿ ಗೆಲುವು ಒದಗಿಸಿದರೂ ಕೂಡ ಸುಸ್ಥಿರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನಸಭೆ ವಿರೋಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram