3 ದಶಕಗಳ ನಂತರ ಕುಂಭ ರಾಶಿಯಲ್ಲಿ ಶನಿ-ಶುಕ್ರ ಒದಾಲಿದೆ; ಜೀವನದಲ್ಲಿ ಈ 4 ರಾಶಿಯವರಿಗೆ ಧನ-ಸಂಪತ್ತು ಹೆಚ್ಚಲಿದೆ….
2023 ರಲ್ಲಿ ಹಲವು ಗ್ರಹಗಳ ಗ್ರಹ ಬದಲಾವಣೆಯ ಸಂಚಾರವಿದೆ. ಅವುಗಳಲ್ಲಿರುವ ತುಂಬಾ ಪ್ರಮುಖವಾಗಿದ್ದು ಶನಿ ಗ್ರಹ ಸಂಚಾರ. ಸರಿ ಸುಮಾರು 3 ದಶಕಗಳ ನಂತರ ಶನಿಯು ಕುಂಭ ರಾಶಿಗೆ ಪ್ರವೇಶಿಸಿದೆ.
ಮಂಗಳವಾರದಿಂದ ಜನವರಿ 17 ರಂದು ಶನಿಯು ಕುಂಭ ರಾಶಿಯ ಮನೆಗೆ ಪ್ರವೇಶಿಸುವುದು. ವೈದಿಕ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುವುದು. ಈ ನಾಲ್ಕು ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಅದೃಷ್ಟವೇ ಅದೃಷ್ಟ ಇದರಿಂದ ಇವರ ಜೀವನದಲ್ಲಿ ಉತ್ತಮ ಬದಲಾವಣೆ ಕಾಣಲಿದ್ದಾರೆ. ಆದಷ್ಟು ಬೇಗ ಶ್ರೀಮಂತರಾ ಶ್ರೀಮಂತರಾಗುತ್ತಾರೆ ರಾಶಿ ಚಕ್ರದಲ್ಲಿ ಉಂಟಾಗುವ ಬದಲಾವಣೆ ಇಂದಾಗಿ ಕೆಲವೊಂದು ರಾಶಿ ಗಳಿಗೆ ಅದೃಷ್ಟ ಬರಲಿದ್ದು ವಿಶೇಷವಾದ ಬದಲಾವಣೆ ಕಂಡು ಬರುತ್ತದೆ. 30 ವರ್ಷಗಳ ನಂತರ ಈ ನಾಲ್ಕು ರಾಶಿಯವರಿಗೆ ಒಲಿದು ಬಂದಿದೆ ಶನಿ ದೇವರ ಆಶೀರ್ವಾದ ದೊರೆಯುತ್ತದೆ. ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ದೇವರ ಕೃಪೆಗೆ ಪಾತ್ರರಾಗಬೇಕು ಪ್ರತಿ ನಿತ್ಯ ದೇವರ ಪೂಜೆಯನ್ನು ಮಾಡಬೇಕು.
ಶನಿಯು ನಮ್ಮ ಕರ್ಮಕ್ಕೆ ತಕ್ಕಂತೆ ಫಲ ನೀಡುತ್ತಾನೆ. ಈ ಶನಿಯು ರಾಶಿ ಬದಲಾವಣೆ ಮಾಡಿದಾಗ ಅದು ನಮ್ಮ ರಾಶಿಯಲ್ಲಿರುವ ಸ್ಥಾನಕ್ಕೆ ತಕ್ಕಂತೆ ನಮ್ಮ ರಾಶಿಯಲ್ಲಿ ಅನೇಕ ಬದಲಾವಣೆಗಳಾಗುತ್ತದೆ.
ಶನಿಯು ನಮ್ಮ ರಾಶಿಯಲ್ಲಿ ಅನುಕೂಲಕರವಾದ ಸ್ಥಾನದಲ್ಲಿದ್ದರೆ ಅದರ ಫಲ ದೀರ್ಘವಾಗಿರುತ್ತದೆ, ಅದರ ಸ್ಥಾನ ಅಷ್ಟು ಅನುಕೂಲಕರವಾಗಿಲ್ಲದಿದ್ದರೆ ಅದರಿಂದ ಉಂಟಾಗುವ ಕಷ್ಟ, ನಷ್ಟಗಳು ಕೂಡ ದೀರ್ಘವಾಗಿರುತ್ತದೆ. ಏಕೆಂದರೆ ಶನಿಯು ತುಂಬಾ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇನ್ನು ಶನಿಯು ಕೆಲವೊಂದು ಗ್ರಹಗಳ ಸಂಯೋಜನೆಯಾದಾಗ ಕೂಡ ಅದರ ಫಲ ಭಿನ್ನವಾಗಿರುತ್ತದೆ.
ಈ ಜನವರಿಯಲ್ಲಿ ಶನಿ-ಶುಕ್ರ ಯುತಿ ಸಂಭವಿಸಲಿದೆ, ಶನಿಯು ಜನವರಿ 17ಕ್ಕೆ ಕುಂಭ ರಾಶಿಗೆ ಪ್ರವೇಶಿಸುತ್ತದೆ. ಶುಕ್ರ ಗ್ರಹ ಜನವರಿ 22ಕ್ಕೆ ಕುಂಭ ರಾಶಿಗೆ ಪ್ರವೇಶಿಸಲಿದೆ. ಶುಕ್ರ ಹಾಗೂ ಶನಿ ನಡುವೆ ಸ್ನೇಹವಿದೆ. ಈಗ ಈ ಎರಡು ಮೈತ್ರಿ ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗವಾಗುವುದರಿಂದ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
ಈ ರಾಶಿಯವರು ತಮ್ಮ ಉದ್ಯೋಗ-ವ್ಯವಹಾರದಲ್ಲಿ ಅನೇಕ ಯಶಸ್ಸನ್ನು ಪಡೆಯುತ್ತಾರೆ. ಮನೆಯಲ್ಲಿ ಸಂಪತ್ತು ಮತ್ತು ಹಣ ಹೆಚ್ಚಾಗುತ್ತದೆ.
ಶನಿ-ಶಕ್ರ ಯುತಿ ಮಕರ ರಾಶಿಯವರಿಗಗೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ರಾಶಿಯ ಎರಡನೇ ಮನೆಯಲ್ಲಿ ಈ ಮೈತ್ರಿಯು ರೂಪುಗೊಳ್ಳುತ್ತಿದೆ. ಇದು ಸಂಪತ್ತಿನ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನೀವು ವಿವಿಧ ಮೂಲಗಳಿಂದ ಆದಾಯವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮಗೆ ಉಳಿತಾಯ ಮಾಡಲು ಸಾಧ್ಯವಾಗುವುದು. ಇನ್ನು ಕೆಲವರು ಪೂರ್ವಿಕರ ಅಥವಾ ಕುಟುಂಬದಿಂದ ಲಾಭ ಪಡೆಯಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಬೆಂಬಲವಿರುತ್ತದೆ ಹಾಗೂ ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಕೆಲಸ ಕಾರ್ಯಗಳಲ್ಲಿ ನಿಮ್ಮ ಸಂವಹನದಿಂದಲೇ ಗಮನ ಸೆಳೆಯುತ್ತೀರಿ. ಹೊಸ ವ್ಯವಹಾರ ಮಾಡಬೇಕು ಅಥವಾ ಹೊಸ ಕೆಲಸಕ್ಕೆ ಹೋಗಬೇಕೆಂದು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ.
ಧನಸ್ಸು ರಾಶಿ:-ರಾಶಿಯವರಿಗೆ ಶನಿ ಸಾಡೆಸಾತ್ ಮುಕ್ತವಾಗಿ ಅದೃಷ್ಟದ ದಿನಗಳು ಶನಿ-ಶುಕ್ರ ಮೈತ್ರಿ ಪ್ರಯೋಜನಕಾರಿಯಾಗಿದೆ. ಈ ರಾಶಿಯವರು ಈ ಅವಧಿಯಲ್ಲಿ ಅನೇಕ ಸೌಲಭ್ಯಗಳನ್ನು ಆನಂದಿಸುತ್ತಾರೆ. ನಿರುದ್ಯೋಗಿಗಳು ಹಾಗೂ ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ದೊರೆಯಲಿದೆ. ಇನ್ನು ಈ ಅವಧಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಸಂಪೂರ್ಣ ಫಲ ಪಡೆಯುತ್ತೀರಿ. ಉದ್ಯೋಗಿಗಳು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ವ್ಯಾಪಾರಸ್ಥರ ವ್ಯಾಪಾರ ಹೆಚ್ಚಾಗುವುದು. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿದೆ.
ಸಿಂಹ ರಾಶಿ:-ಶನಿ-ಶುಕ್ರ ಯುತಿ ಸಿಂಹ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಸಂಗಾತಿಯ ಬೆಂಬಲ ಸಿಗುವುದರಿಂದ ಯಶಸ್ಸು ಗಳಸುವಿರಿ. ಪಾಲುದಾರಿಕೆಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ವೃತ್ತಿ ಜೀವನದಲ್ಲೂ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ, ಮೇಲಾಧಿಕಾರಿಗಳ ಸಹಾಯ ದೊರೆಯಲಿದೆ. ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಇನ್ನು ವಿವಾಹ ಸಂಬಂಧ ನೋಡುತ್ತಿದ್ದರೆ ಈ ಅವಧಿಯಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದೆ.
ಮೇಷ ರಾಶಿ:- ಶುಕ್ರ-ಶನಿ ಯುತಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರಲಿದೆ. ಈ ಅವಧಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುತ್ತೀರಿ. ನೀವು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ, ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬಹುದು. ನಿಮ್ಮ ಹಣ ಕಳೆದು ಹೋಗಿದ್ದರೆ ಅಥವಾ ಬರಬೇಕಾಗಿದ್ದ ಹಣ ಹಲವು ಕಾರಣಗಳಿಂದ ನಿಮ್ಮ ಕೈ ಸೇರದಿದ್ದರೆ ಈ ಅವಧಿ ನಿಮ್ಮ ಹಣ ನಿಮಗೆ ದೊರೆಯಲಿದೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದಿದೆ. ನಿಮ್ಮ ಹೂಡಿಕೆಯಿಂದಲೂ ನೀವು ಲಾಭ ಪಡೆಯಬಹುದು.
Astrology : After 3 decades Saturn-Venus conjunction in Aquarius; Wealth will increase for these 4 signs in life.