ಮಹರಾಷ್ಟ್ರ ಪೊಲೀಸರ ಭರ್ಜರಿ ಬೇಟೆ 26 ನಕ್ಸಲರು ಎನ್ಕೌಂಟರ್…

1 min read

ಮಹರಾಷ್ಟ್ರ ಪೊಲೀಸರ ಭರ್ಜರಿ ಬೇಟೆ 26 ನಕ್ಸಲರು ಎನ್ಕೌಂಟರ್…

ಮಹರಾಷ್ಟ್ರ ಜಿಲ್ಲೆಯ ಗಡ್​ಚಿರೋಲಿ ಜಿಲ್ಲೆಯಲ್ಲಿ ನಕ್ಸಲರ ಮತ್ತು  ಪೊಲೀಸರು ನಡೆವೆ ನಡೆದ ಕಾಳಗದಲ್ಲಿ  26 ಮಾವೋವಾದಿಗಳು ಹತರಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಹಾಗೂ ಸಿ-60 ಘಟಕ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 26 ನಕ್ಸಲರನ್ನು ಹೊಡೆದುರುಳಿಸಲಾಗಿದೆ.

ಜಿಲ್ಲೆಯ ಗ್ಯಾರಹ್​ಬತ್ತಿ ಅರಣ್ಯ ವಲಯದ ಧನೋರಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು.  ಕಾರ್ಯಚರಣೆಯಲ್ಲಿ ಏಕಾಏಕಿ ಗುಂಡಿನ ದಾಳಿ ನಡೆದಿದೆ.  ನಿಷೇದಿತ ಕಮ್ಯೂನಿಸ್ಟ್  ಪಾರ್ಟಿ ಆಫ್  ಇಂಡಿಯಾ (ಮಾವೋವಾದಿ ) ಸಂಘಟನೆಯ 26 ಉಗ್ರರನ್ನ ಕಾಡಿನಲ್ಲಿ ಹೊಡೆದುರುಳಿಸಿರುವುದಾಗಿ ಗಡ್ಚಿರೋಲಿ ಎಸ್ ಪಿ ಅಂಕಿತ್ ಗೋಯೆಲ್ ತಿಳಿಸಿದರು.

ಎಸ್ ಪಿ ಅಂಕಿತ್ ಗೋಯೆಲ್ ಮ್ತು ಹೆಚ್ಚುವರಿ ಎಸ್ ಪಿ ಸೌಮ್ಯ ಮುಂಡೆ ನೇತೃತ್ವದಲ್ಲಿ ಮಾವೋವಾದಿಗಳ ಮೇಲೆ ದಾಳಿ ಮಾಡಲಾಗಿತ್ತು. ಈ ಗುಂಡಿನ ಚಕಮಕಿಯಲ್ಲಿ  4 ಪೊಲೀಸರು ತೀವ್ರವಾಗಿ   ಗಾಯಗೊಂಡಿದ್ದಾರೆ.  ಕಾಡಿನಿಂದ 26 ದೇಹಗಳನ್ನ ತರಲಾಗಿದೆ.

ವಿಶ್ವ ಡಯಾಬಿಟೀಸ್ ಡೇ – ಆರೈಕೆ ಈಗಲ್ಲವಾದರೆ ಮತ್ತೆ ಯಾವಾಗ ?

ಬಿಟ್ ಕಾಯಿನ್ ಆರೋಪ ಕಾಂಗ್ರೆಸ್ನ ಖಾಲಿ ಡಬ್ಬಿ – ಕೆ. ಎಸ್. ಈಶ್ವರಪ್ಪ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd