ಮಹರಾಷ್ಟ್ರ ಪೊಲೀಸರ ಭರ್ಜರಿ ಬೇಟೆ 26 ನಕ್ಸಲರು ಎನ್ಕೌಂಟರ್…
ಮಹರಾಷ್ಟ್ರ ಜಿಲ್ಲೆಯ ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲರ ಮತ್ತು ಪೊಲೀಸರು ನಡೆವೆ ನಡೆದ ಕಾಳಗದಲ್ಲಿ 26 ಮಾವೋವಾದಿಗಳು ಹತರಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಹಾಗೂ ಸಿ-60 ಘಟಕ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 26 ನಕ್ಸಲರನ್ನು ಹೊಡೆದುರುಳಿಸಲಾಗಿದೆ.
ಜಿಲ್ಲೆಯ ಗ್ಯಾರಹ್ಬತ್ತಿ ಅರಣ್ಯ ವಲಯದ ಧನೋರಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಚರಣೆಯಲ್ಲಿ ಏಕಾಏಕಿ ಗುಂಡಿನ ದಾಳಿ ನಡೆದಿದೆ. ನಿಷೇದಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ ) ಸಂಘಟನೆಯ 26 ಉಗ್ರರನ್ನ ಕಾಡಿನಲ್ಲಿ ಹೊಡೆದುರುಳಿಸಿರುವುದಾಗಿ ಗಡ್ಚಿರೋಲಿ ಎಸ್ ಪಿ ಅಂಕಿತ್ ಗೋಯೆಲ್ ತಿಳಿಸಿದರು.
ಎಸ್ ಪಿ ಅಂಕಿತ್ ಗೋಯೆಲ್ ಮ್ತು ಹೆಚ್ಚುವರಿ ಎಸ್ ಪಿ ಸೌಮ್ಯ ಮುಂಡೆ ನೇತೃತ್ವದಲ್ಲಿ ಮಾವೋವಾದಿಗಳ ಮೇಲೆ ದಾಳಿ ಮಾಡಲಾಗಿತ್ತು. ಈ ಗುಂಡಿನ ಚಕಮಕಿಯಲ್ಲಿ 4 ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾಡಿನಿಂದ 26 ದೇಹಗಳನ್ನ ತರಲಾಗಿದೆ.