ATM robber arrested-ಬೆಂಗಳೂರು: ಇತ್ತಿಚಿನ ದಿನಮಾನದಲ್ಲಿ ಎಲ್ಲರೂ ಶೀಘ್ರವಾಗಿ ಶ್ರೀಮಂತರಾಗಬಯಸುತ್ತಾರೆ ಹಾಗೆ ಯೂಟ್ಯೂಬ್ ನೋಡಿ ಟ್ರೈನಿಂಗ್ ಪಡೆದು ಎಟಿಎಂ ATM ದರೋಡೆಗೆ ಮುಂದಾದ ಖತರ್ನಾಕ್ ಗ್ಯಾಂಗ್‍ವೊಂದು ಪೊಲೀಸರ ಕೈ ಸೆರೆಯಾಗಿದೆ.
ಈ ಗ್ಯಾಂಗ್ ರಾಜ್ಯ, ಹೊರರಾಜ್ಯಗಳಲ್ಲಿಯೂ ಕೈಚಳಕ ತೋರಿಸಿದ್ದ ಖದೀಮರಿಗೆ ಪೊಲೀಸರು ಕಾರಾಗೃಹದ ದಾರಿ ತೋರಿಸಿದ್ದಾರೆ. ಈ ಗ್ಯಾಂಗ್ ಎಟಿಎಂ ಕೇಂದ್ರದ ಒಳಗೆ ಗ್ಯಾಸ್ ಕಟರ್ ಕೊಂಡೊಯ್ಯುವ ಮೂಲಕ ಕಳ್ಳತನಕ್ಕೆ ಯತ್ನಿಸಿದ್ದಾಗ ಆನೇಕಲ್ ಉಪವಿಭಾಗದ ಜಿಗಣಿ ಪೋಲೀಸರ ಅತಿಥಿಯಾಗಿದ್ದಾರೆ.
ಕಳ್ಳರನ್ನ ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಜಿಗಣಿ ಠಾಣೆಯ ಪೊಲೀಸರು
ಆರೋಪಿಗಳು ಅಸ್ಸಾಂ ಮೂಲದವರಾಗಿದ್ದು ಬಾಬುಲ್ ನೋನಿಯಾ, ಮಹ್ಮದ್ ಆಸೀಪ್ ಉದ್ದಿನ್, ತಪಸ್ ಬಿಸ್ವಾಸ್, ದಿಲ್ವಾರ್ ಹುಸೇನ್ ಲಷ್ಕರ್, ರೂಹುಲ್ ಅಮೀನ್ ಎಂದು ಗುರುತಿಸಲಾಗಿದೆ. ಇವರು ಕೆಲ ವರ್ಷಗಳ ಹಿಂದೆ ಅತ್ತಿಬೆಲೆ ಸಮೀಪದ ತಿರುಪಾಳ್ಯಕ್ಕೆ ಬಂದು ಕೂಲಿ ಕೆಲಸ ಮಾಡುತ್ತಿದ್ದರು. ಬೇಗನೆ ಹೆಚ್ಚು ಹಣ ಗಳಿಸುವ ಪ್ಲ್ಯಾನ್ ಮಾಡಿದ್ದ ಇವರು ಯೂಟ್ಯೂಬ್‍ನಲ್ಲಿ ಎಟಿಎಂ ಕಳ್ಳತನ ಮಾಡುವುದು ಹೇಗೆ ಎನ್ನುವ ಬಗ್ಗೆ ಟ್ರೈನಿಂಗ್ ಪಡೆದು ಕೊಂಡಿದ್ದರು.
ಇವರು ಒಂದು ಸಿಲಿಂಡರ್ ಕಳ್ಳತನ ಮಾಡಿ . ನಂತರ ಗ್ಯಾಸ್ ಕಟರ್ ತೆಗೆದುಕೊಂಡು ಮನೆಯಲ್ಲಿ ಕಬ್ಬಿಣವನ್ನ ಕಟ್ ಮಾಡಿ ಪ್ರ್ಯಾಕ್ಟಿಸ್ ಮಾಡಿದ್ದಾರೆ.
ಐವರ ತಂಡ ಕಳೆದ ತಿಂಗಳು ರಾತ್ರಿ ಆಟೋದಲ್ಲಿ ಶ್ರೀರಾಮಪುರದ ಎಟಿಎಂ ಕೇಂದ್ರಕ್ಕೆ ನುಗ್ಗಿ ಕಳ್ಳನಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸೈರನ್ ಬಂದಾಗ ಸಿಲಿಂಡರ್, ಗ್ಯಾಸ್ ಕಟರ್‍ಗಳನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಈ ಪ್ರಕರಣ ಸಂಬಂಧಸಿ ಜಿಗಣಿ ಪೋಲೀಸ್ ಇನ್ಸ್ ಪೆಕ್ಟರ್ ಸುದರ್ಶನ್ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿ ದ್ದಾರೆ. ತನಿಕೆಯಲ್ಲಿ 250 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ವಿಕ್ಷೀಸಿದ ಪೊಲೀಸರು ಅಸ್ಸಾಂ ಕಡೆ ಪರಾರಿಯಾಗಲು ಮುಂದಾಗಿದ್ದ ಆರೋಪಿಗಳನ್ನ ಬಂಧಿಸಿ ಕಾರಾಗೃಹಕ್ಕೆ ತಳ್ಳಿದ್ದಾರೆ.