ಬೆಂಗಳೂರು: ಆಹಾರದಲ್ಲಿ ಜಿರಳೆ (Cockroach) ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಇದನ್ನು ಪ್ರಶ್ನಿಸಿದ ಹೈಕೋರ್ಟ್ ವಕೀಲರೊಬ್ಬರ (Karnatka High Court Lawyer) ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ವಕೀಲೆ ಶೀಲಾ ದೀಪಕ್ ಈ ಕುರಿತು ಆರೋಪಿಸಿದ್ದಾರೆ. ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್ ನಲ್ಲಿಯೇ ಈ ಅವಾಂತರ ನಡೆದಿದೆ ಎನ್ನಲಾಗಿದೆ.
ಪನೀರ್ ಬಟರ್ ಮಸಾಲಾ ಖಾದ್ಯದಲ್ಲಿ ಜಿರಳೆ ಕಂಡು ಬಂದಿದೆ. ಆನಂತರ ಅವರು ಮೊಬೈಲ್ ನಿಂದ ಅಡುಗೆ ಮನೆಯ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದಾಗ ಇಬ್ಬರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ವಕೀಲೆ ವಿಧಾನಸಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.








