ಆನೇಕಲ್: ಶ್ರೀಗಂಧದ ಮರ (Sandalwood Tree) ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯ ಮೇಲೆ ಫಾರೆಸ್ಟ್ಗಾರ್ಡ್ (Forest Gard) ಫೈರಿಂಗ್ (Firing) ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಲ್ಕೆರೆ ಬಳಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಶ್ರೀಗಂದದ ಮರ ಹೆಚ್ಚಾಗಿ ಕಳ್ಳತನವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಫಾರೆಸ್ಟ್ ಬೀಟ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಗಂಧದ ಮರ ಕಳ್ಳತನ ಮಾಡಲು ಇಬ್ಬರು ಬಂದಿದ್ದರು.
ಈ ಸಂದರ್ಭದಲ್ಲಿ ರೌಂಡ್ಸ್ ನಲ್ಲಿದ್ದ ಫಾರೆಸ್ಟ್ ಗಾರ್ಡ್ಗಳು ಶರಣಾಗುವಂತೆ ವಾರ್ನಿಂಗ್ ಮಾಡಿದ್ದಾರೆ. ಶರಣಾಗದೆ ಪರಾರಿಯಾಗಲು ಯತ್ನಿಸಿದಾಗ ಫಾರೆಸ್ಟ್ಗಾರ್ಡ್ ವಿನಯ್ ಫೈರಿಂಗ್ ಮಾಡಿದ್ದಾರೆ. ಹೀಗಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮೃತನು ಮಾಲೂರು ಮೂಲದವನೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಮತ್ತು ಎಫ್ಎಸ್ಎಲ್ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಗರಗಸ, ಮಚ್ಚುಗಳು ಸಿಕ್ಕಿವೆ. ಪಿಂಗರ್ ಪ್ರಿಂಟ್, ಡಾಗ್ ಸ್ಕ್ವಾಡ್, ಎಫ್ಎಸ್ಎಲ್ ತಂಡದವರು ಸಹ ಪರಿಶೀಲನೆ ನಡೆಸುತ್ತಿದ್ದಾರೆ.