ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (NSW) ನಲ್ಲಿ ಭೀಕರ ಪ್ರವಾಹ

1 min read

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (NSW) ನಲ್ಲಿ ಭೀಕರ ಪ್ರವಾಹ

ಆಸ್ಟ್ರೇಲಿಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ನ್ಯೂ ಸೌತ್ ವೇಲ್ಸ್ (NSW) ಭಾನುವಾರ ಭೀಕರ ಪ್ರವಾಹಕ್ಕೆ ಸಾಕ್ಷಿಯಾಯಿತು. ಅಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಅಧಿಕಾರಿಗಳು ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದಾರೆ.

flood evacuations
ಮುಖ್ಯವಾಗಿ ಉತ್ತರದಲ್ಲಿರುವ ಎನ್‌ಎಸ್‌ಡಬ್ಲ್ಯೂನ ಹದಿನಾರು ಪ್ರದೇಶಗಳನ್ನು ವಿಪತ್ತು ಪೀಡಿತ ಪ್ರದೇಶ‌ ಎಂದು ಘೋಷಿಸಲಾಗಿದೆ ಎಂದು ಎನ್‌ಎಸ್‌ಡಬ್ಲ್ಯೂ ಪೊಲೀಸ್ ಮತ್ತು ತುರ್ತು ಸೇವೆಗಳ ಸಚಿವ ಡೇವಿಡ್ ಎಲಿಯಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದಾರೆ.

ಸಿಡ್ನಿಯ ಪಶ್ಚಿಮಕ್ಕೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳನ್ನು ರಾತ್ರಿಯಿಡೀ ಸ್ಥಳಾಂತರಿಸಲಾಯಿತು.

ಎನ್ಎಸ್ಡಬ್ಲ್ಯೂ ಪ್ರೀಮಿಯರ್ ಗ್ಲಾಡಿಸ್ ಬೆರೆಜಿಕ್ಲಿಯನ್ ಈ ಪ್ರದೇಶವು 100 ವರ್ಷಗಳಲ್ಲಿ ಇಂತಹ ಘಟನೆಯನ್ನು ಮೊದಲ ಬಾರಿಗೆ ಅನುಭವಿಸುತ್ತಿದೆ ಮತ್ತು ರಾಷ್ಟ್ರೀಯ ವಿಪತ್ತು ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಪಶ್ಚಿಮ ಸಿಡ್ನಿಯ ಕೆಲವು ಸ್ಥಳಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ 300 ಮಿಲಿಮೀಟರ್ (11.8 ಇಂಚು) ಮಳೆಯಾಗಿದ್ದು ಇದು ದಾಖಲೆಗಳನ್ನು ಮುರಿದಿದೆ.
flood evacuations

ಮಧ್ಯ ಉತ್ತರ ಕರಾವಳಿಯಲ್ಲಿ ಸನ್ನಿವೇಶ ಹದಗೆಡುತ್ತವೆ ಎಂದು ನಾವು ಭಾವಿಸದಿದ್ದರೂ, ಖಂಡಿತವಾಗಿಯೂ ಪರಿಸ್ಥಿತಿಗಳು ಇದೇ ರೀತಿ ಮುಂದುವರಿಯುತ್ತವೆ. ಆದ್ದರಿಂದ ಈಗಾಗಲೇ ಪರಿಣಾಮ ಬೀರಿದ ಭಾಗಗಳಲ್ಲಿ ಮಳೆ ಮುಂದುವರಿಯುತ್ತದೆ ಎಂದು ಬೆರೆಜಿಕ್ಲಿಯನ್ ಪತ್ರಕರ್ತರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd