ಚೀನಾಗೆ ‘ವ್ಯವಾಹಾರಿಕ’ ಪಂಚ್ ಕೊಟ್ಟ ಆಸ್ಟ್ರೇಲಿಯಾ….!
ಆಸ್ಟ್ರೇಲಿಯಾ : ರೆಡ್ ಡ್ರ್ಯಾಗನ್ ಚೀನಾಗೆ ಆಸ್ಟ್ರೇಲಿಯಾ ವ್ಯಾವಹಾರಿಕವಾಗಿ ಪಂಚ್ ಕೊಟ್ಟಿದೆ. ಹೌದು.. ಆಸ್ಟ್ರೇಲಿಯಾದ ರಾಜ್ಯ ಸರ್ಕಾರವೊಂದು ಮಾಡಿಕೊಂಡಿದ್ದ ಮೂಲಸೌಲಭ್ಯ ಅಭಿವೃದ್ಧಿ ಒಪ್ಪಂದಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗಬಹುದೆಂಬ ಕಾರಣಕ್ಕೆ ಆಸ್ಟ್ರೇಲಿಯಾ ಸರ್ಕಾರ ರದ್ದುಗೊಳಿಸಿದೆ.
ಆಸ್ಟ್ರೇಲಿಯಾದ ಈ ನಿರ್ಧಾರದಿಂದ ರೆಡ್ ಡ್ರ್ಯಾಗನ್ ಗೆ ಶಾಕ್ ಆಗಿದ್ದು, ಚೀನಾದಿಂದ ತೀವ್ರ ಆಕ್ಷೇಪ ವ್ಯಕ್ರವಾಗಿದೆ. ಅಂದ್ಹಾಗೆ ವಿಕ್ಟೋರಿಯಾ ರಾಜ್ಯ ಸರ್ಕಾರವು ಚೀನಾದೊಂದಿಗೆ ‘ಬೆಲ್ಟ್ ಆಯಂಡ್ ರೋಡ್’ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗೆ 2018 ಮತ್ತು 2019ರಲ್ಲಿ ಸಹಿ ಹಾಕಿತ್ತು.
ಅದೇ ರಾಜ್ಯದ ಶಿಕ್ಷಣ ಇಲಾಖೆಯು 1999ರಲ್ಲಿ ಸಿರಿಯಾ ಮತ್ತು 2004ರಲ್ಲಿ ಇರಾನ್ ಜತೆಗೂ ಒಪ್ಪಂದ ಮಾಡಿಕೊಂಡಿತ್ತು. ಈ ನಾಲ್ಕೂ ಒಪ್ಪಂದಗಳು ಹೊಸ ಕಾನೂನುಗಳ ಅಡಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂಬ ಕಾರಣಕ್ಕೆ ಅವುಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಆಸ್ಟ್ರೇಲಿಯಾ ಸರ್ಕಾರ ಬಂದಿದೆ ಎಂದು ವಿದೇಶಾಂಗ ಸಚಿವ ಮಾರಿಸ್ ಪೈನೆ ತಿಳಿಸಿದ್ದಾರೆ.