4ನೇ ಮಹಡಿಯಿಂದ ಜಿಗಿದ ಯುವತಿಯ ಪ್ರಾಣ ಉಳಿಸಿದ ಆಟೋ..!
ತೆಲಂಗಾಣ : ಯುವತಿಯೊಬ್ಬಳು ಕಟ್ಟಡದ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ ಅದೃಷ್ಟವಶಾತ್ ಆಕೆ ಜೀವ ಉಳಿದಿದ್ದು. ಅಷ್ಟಕ್ಕೂ ಅಷ್ಟು ಎತ್ತರದಿಂದ ಜಿಗಿದ ಆಕೆ ಬದುಕುಳಿದಿದ್ದು ಒಂದು ಆಟೋದಿಂದ.
ಪತ್ನಿ, ಅತ್ತೆಯ ಹತ್ಯೆ ಮಾಡಿ ಮಕ್ಕಳ ಎದುರಲ್ಲೇ ಮೃತದೇಹವನ್ನು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿ..!
ಹೌದು.. ಕಟ್ಟಡದ ಮೇಲಿಂದ ಬಿದ್ದ ಆಕೆ ಸೀದಾ ಆಟೋ ಮೇಲೆ ಬಿದ್ದಿದ್ದಾಳೆ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ವೇಳೆ ಆಕೆ ವಿದ್ಯುತ್ ವೈರ್ಗಳ ಮೇಲೆ ಬಿದ್ದು, ನಂತರ ಆಟೋ ಮೇಲೆ ಬಿದ್ದಿದ್ದಾಳೆ. ಹೀಗಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತೆಲಂಗಾಣದ ಜಂಗಾಂವ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಅಕ್ರಮ ಸಂಬಂಧ : ಮದುವೆಯಾಗು ಎಂದಾಕೆಯನ್ನ ಬರ್ಬರವಾಗಿ ಕೊಂದ..!
ಇನ್ನು ಆಟೋ ಮುಂದಿನ ಭಾಗ ಸಂಪೂರ್ಣವಾಗಿ ಹಾಳಾಗಿದೆ. ಸದ್ಯ ಆಕೆಗೆ ಜಂಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಯುವತಿ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದಳು. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel