ಅವಿನಾಶ್ ಅವರು ಇನ್ನಿಲ್ಲ , ಎಂದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ನಟ
ಇತ್ತೀಚೆಗೆ ಸ್ಯಾಂಡಲ್ ವುಡ್ , ಬಾಲಿವುಡಡ್ , ಕಿರುತೆರೆ ನಟರ ಸಾವಿನ ವಿಚಾರವಾಗಿ ಕೆಲ ಕಿಡಿಗೇಡಿಗಳು ಸುಳ್ಳು ಪುಕಾರ್ ಹಬ್ಬಿಸುತ್ತಾ ಇರುವುದು ಹೆಚ್ಚಾಗಿದೆ.. ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವರ ಬಗ್ಗೆ ಇಂತಹದ್ದೇ ಸುಳ್ಳು ಸುದ್ದಿಗಳು ಹರಿದಾಡಿದ್ದವು..
ಇದೇ ರೀತಿ ಇತ್ತೀಚಿಗೆ ಸ್ಯಾಂಡಲ್ ವುಡ್ ನ ವರ್ಸಟೈಲ್ ಆಕ್ಟರ್ ಅವಿನಾಶ್ ಅವರ ಬಗ್ಗೆ ಕೆಲ ಕಿಡಿಗೇಡಿಗಳು ಇಂತಹದ್ದೇ ಒಂದು ಸುದ್ದಿ ಹರಿಬಿಟ್ಟಿದ್ದರು.. ಇದು ಅನೇಕರಲ್ಲಿ ಗೊಂದಲಗಳನ್ನ ಹುಟ್ಟುಹಾಕಿತ್ತು.. ಹೌದು ಅವಿನಾಶ್ ಅವರು ಇನ್ನಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಅವಿನಾಶ್ ಅವರು ಈಗ ಇಂತಹ ಸುದ್ದಿಗಳ ಹಬ್ಬಿಸಿದವರ ವಿರುದ್ಧ ಸಿಡಿದೆದ್ದಿದ್ದು , ಕಾನೂನುಕ್ರಮಕ್ಕೆ ಮುಂದಾಗಿದ್ದಾರೆ..
ಆದ್ರೆ ಈ ಹಿಂದೆ ಇಂತಹ ಸುದ್ದಿ ಹರಿದಾಡಿದಾಗ ನೋಡಿ ಅವಿನಾಶ್ ಅವರು ಶಾಕ್ ಆಗಿದ್ದರು.. ಆದ್ರೆ ಈಗಲೂ ಮತ್ತೆ ಇಂತಹದ್ದೇ ಸುದ್ದಿ ಹರಿದಾಡಲಾರಂಭಿಸಿದ್ದು , ಅವಿನಾಶ್ ಅವರನ್ನ ಕೆರಳಿಸಿದೆ.. ಹೀಗಾಗಿ ಅವಿನಾಶ್ ಅವರು ಈ ಬಾರಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.. ಯೂಟ್ಯೂಬ್ ನಲ್ಲಿ ಹರಿದಾಡಿದ್ದ ಫೇಕ್ ನ್ಯೂಸ್ ನೋಡಿ ಶಾಕ್ ಆಗಿರುವ ಅವಿನಾಶ್ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು ಸೈಬರ್ ಕ್ರೈಮ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸೋದಾಗಿ ಹೇಳಿದ್ದಾರೆ..