ಸಿಡ್ನಿ : ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ಅವರಿಗೆ ಆಸ್ಟ್ರೇಲಿಯಾ ಸರ್ಕಾರವು ಅತ್ಯುನ್ನತ ನಾಗರಿಕ ಪ್ರಶಸ್ತಿ (Order of Australia) ಪ್ರದಾನ ಮಾಡಿದೆ.
ಆಸ್ಟ್ರೇಲಿಯಾ ಸರ್ಕಾರವು ಪ್ರಶಸ್ತಿ ನೀಡುತ್ತಿರುವ ಫೋಟೋವನ್ನು ಆಸ್ಟ್ರೇಲಿಯಾದ (Australia) ರಾಯಭಾರಿ ಬ್ಯಾರಿ ಓ ಫಾರೆಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ರತನ್ ಟಾಟಾರನ್ನು ಉದ್ಯಮ, ವ್ಯಾಪಾರ ಹಾಗೂ ಲೋಕೋಪಕಾರದ ದೈತ್ಯ ಎಂದು ಕೂಡ ಅವರು ಬಣ್ಣಿಸಿದ್ದಾರೆ. ಅಲ್ಲದೇ, ಟಾಟಾ ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿ ಮಹತ್ವದ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ.
ರತನ್ ಟಾಟಾ ಅವರ ಉದ್ಯಮ ಮತ್ತು ಲೋಕೋಪಕಾರದ ಟೈಟನ್ ಆಗಿದ್ದಾರೆ. ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿಯೂ ಗಮನಾರ್ಹ ರೀತಿಯಲ್ಲಿ ಪ್ರಭಾವ ಬೀರಿವೆ. ಆಸ್ಟ್ರೇಲಿಯಾ-ಭಾರತ ಸಂಬಂಧಕ್ಕೆ ರತನ್ ಟಾಟಾ ಅವರ ದೀರ್ಘಕಾಲದ ಶ್ರಮ ಗುರುತಿಸಿ Order of Australia ಗೌರವವನ್ನು ನೀಡಲು ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಫಾರೆಲ್ ತಮ್ಮ ಟ್ವೀಟ್ನಲ್ಲಿ ರತನ್ ಟಾಟಾ ಅವರನ್ನು ಗೌರವಿಸುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಆಸ್ಟ್ರೇಲಿಯನ್ ರಾಯಭಾರಿ ಹಂಚಿಕೊಂಡ ಫೋಟೋಗಳಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಸಹ ಇದ್ದಾರೆ.