ನ್ಯೂಸ್ ಡೆಸ್ಕ್ : ಟಾಲಿವುಡ್ ಚೆಂದುಳ್ಳಿ ಚೆಲುವೆ ನಟಿ ಪೂಜಾ ಹೆಗ್ಡೆ ಸಖತ್ ಬ್ಯೂಸಿ ಪರ್ಸನ್ . ನಿರಂತರವಾಗಿ ಒಂದಲ್ಲದೊಂದು ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿ ಇರ್ತಾರೆ. ಸದ್ಯ ತೆಲಗು ಚಿತ್ರರಂಗದಲ್ಲಿ ಹಿಟ್ ಮೇಲೆ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಕೀರ್ತಿ ಪೂಜಾ ಹೆಗ್ಡೆಗೆ ಸಲ್ಲುದತ್ತದೆ. ಸಿನಿ ಪರದೆ ಮೇಲೆ ತನ್ನ ಮೋಹಕ ನಗುವಿನ ಮೂಲಕ ಮೋಡಿ ಮಾಡಿದ್ದಾಳೆ. ಸದಾ ಲವ್ ಅಫೇರ್ ಮತ್ತು ಡೇಟಿಂಗ್ ವಿಚಾರದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ.
ಸದ್ಯ ಪೂಜಾ ಹೆಗ್ಡೆ ಬಾಹುಬಲಿ ಖ್ಯಾತಿಯ ಪ್ರಭಾಸ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಲಿವುಡ್ ನ ಮೊಹೆಂಜೊದಾರೋ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ನಟಿಸುವಾಗ ಹೃತಿಕ್ ಮೇಲೆ ಪ್ರೀತಿ ಚಿಗುರಿತ್ತು ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ವಿಚಾರವನ್ನು ಬೆಡಗಿ ಪೂಜೆ ಹೆಗ್ಡೆ ತಳ್ಳಿ ಹಾಕಿದ್ದಳು. ಹೀಗೆ ಆಗಾಗ ಕೇಳಿ ಬರುವ ಗಾಳಿ ಸುದ್ದಿಗಳನ್ನು ಪೂಜಾ ಹೆಗ್ಡೆ ನಯವಾಗಿ ತಳ್ಳಿ ಹಾಕಿದ್ದಾಳೆ.
ತನ್ನ ಕನಸಿನ ಗಂಡ ಹೇಗಿರಬೇಕು ಎಂದು ಪೂಜಾ ಹೆಗ್ಡೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ನಾನು ಮದುವೆಯಾಗುವ ಹುಡುಗ ಹ್ಯಾಂಡ್ಸಮ್ ಆಗಿರಬೇಕು. ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಮನಸ್ಸು ಆತನಿಗೆ ಇರಬೇಕು. ಅದ್ಭುತವಾದ ಬಂಗಲೆಯೊಂದರಲ್ಲಿ ನಾವಿಬ್ಬರು ವಾಸಿಸಬೇಕು. ನಮ್ಮೊಟ್ಟಿಗೆ ನಮ್ಮ ಪ್ರೀತಿಯ ನಾಯಿಗಳು ಇರಬೇಕು ಎಂದು ಹೇಳಿದ್ದಳು.
ಪೂಜಾ ಹೆಗ್ಡೆಯ ಈ ಮಾತಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಪೂಜಾ ಹೆಗ್ಡೆಯ ಕನಸಿನ ಹುಡುಗ ಪ್ರಭಾಸ್ ಅಲ್ಲದೇ ಬೇರೆ ಯಾರು ಆಗಲು ಸಾಧ್ಯ ಎಂಬ ಚರ್ಚೆ ಆಕೆಯ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪ್ರಭಾಸ್ ನಟನೆಯ 20 ನೇ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಆದರೆ ಈ ಬಗ್ಗೆ ನಟಿ ಪೂಜಾ ಹೆಗ್ಡೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ.
ಇನ್ನೊಂದೆಡೆ ಬಾಹುಬಲಿ ಚಿತ್ರದ ಶೂಟಿಂಗ್ ಟೈಮ್ ನಲ್ಲಿ ಪ್ರಭಾಸ್ ಮತ್ತು ಅನುಷ್ಕ ಶೆಟ್ಟಿ ಲವ್ ನಲ್ಲಿ ಇದ್ದಾರೆ. ಅವರಿಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಗಾಳಿ ಸುದ್ದಿಯನ್ನು ಪ್ರಭಾಸ್ ತಳ್ಳಿ ಹಾಕಿದ್ದರು.