ಇದೆಂತಾ ವಿಚಿತ್ರ | ಮಾನವನಂತೆ ಮುಖ ಇರುವ ಮೇಕೆ ಮರಿ
ಗಾಂಧಿನಗರ : ಮಾನವನಂತೆ ಮುಖ ಇರುವ ಮೇಕೆ ಮರಿಯೊಂದು ಜನಿಸಿರುವ ವಿಚಿತ್ರ ಘಟನೆ ಗುಜರಾತ್ ನಲ್ಲಿ ನಡೆಡಿದೆ.
ಗುಜರಾತ್ ನ ಸಾಂಗ್ದ್ ತಾಲೂಕಿನ ಟ್ಯಾಪಿ ನದಿಸಮೀಪದ ಸೆಲ್ಟಿಪಾಡಾ ಗ್ರಾಮದ ಅಜಯ್ಭಾಯ್ ಎಂಬವರ ಮನೆಯಲ್ಲಿ ಈ ರೀತಿ ವಿಚಿತ್ರ ಘಟನೆ ನಡೆದಿದೆ.
ಈ ವಿಚಿತ್ರ ಮೇಕೆ ಮರಿಯ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮೇಕೆ ಮರಿ ನಾಲ್ಕು ಕಾಲು ಹಾಗೂ ಕಿವಿಗಳನ್ನು ಹೊಂದಿದೆ. ಆದರೆ ಉಳಿದ ಅರ್ಧ ಭಾಗ ನೋಡಲು ಮನುಷ್ಯನಂತೆ ಕಾಣಿಸುತ್ತದೆ.
ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯರಂತೆ ಇದೆ. ಅಲ್ಲದೆ ಮೇಕೆ ಬಾಲವನ್ನು ಸಹ ಹೊಂದಿಲ್ಲ.
ಇನ್ನು ಈ ಮೇಕೆ ಮರಿ ಜನಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮೇಕೆ ಮರಿಗೆ ಪೂಜೆ ಮಾಡುವುದನ್ನು ಕಾಣಬಹುದಾಗಿದೆ.