ಮಾಸ್ಕ್ ನಂತೆ ಮುಖಕ್ಕೆ ಬಣ್ಣಬಳಿದುಕೊಂಡು ಕಳ್ಳಾಟ ಆಡಿದ ಯುವತಿಯರು ತಗ್ಲಾಕೊಂಡಿದ್ದು ಹೇಗೆ ಗೊತ್ತಾ..?
ಬಾಲಿ: ಮಾಸ್ಕ್ ನಂತೆ ಮುಖಕ್ಕೆ ಬಣ್ಣಬಳಿದುಕೊಂಡು ಕಳ್ಳಾಟ ಆಡಿದ ಯುವತಿಯರು ತಗ್ಲಾಕೊಂಡಿದ್ದ ಹೇಗೆ ಗೊತ್ತಾ..? ಕೊರೊನಾದಿಂದ ಬಚಾವ್ ಆಗಲು ಇಡೀ ವಿಶ್ವದ ಜನ ಮಾಸ್ಕ್ ಧರಿಸುತ್ತಿದ್ಧಾರೆ. ಸುಮಾರು 1 ವರ್ಷದಿಂದ ಮಾಸ್ಕ್ ಒಂದು ರೀತಿ ನಮ್ಮ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇನ್ನೂ ಮಾಸ್ಕ್ ಧಾರಣೆಯನ್ನ ಎಲ್ಲಾ ಸರ್ಕಾರಗಳು ಕಡ್ಡಾಯಗೊಳಿಸಿವೆ.
ಕ್ರಮೇಣ ಮಾಸ್ಕ್ ಗಳು ಫ್ಯಾಶನ್ ಆಗಿ ಬದಲಾಗಿವೆ. ತರಹೇವಾರಿ ಮಾಸ್ಕ್ ಗಳು ಮಾರುಕಟ್ಟೆಗೆ ಬಂದಿದ್ದು, ಜನರ ಗಮನ ಸೆಲೆದಿವೆ. ಮತ್ತೊಂದೆಡೆ ಜನ ಮಾಸ್ಕ್ ಗಳಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸದೇ ಇರಲು ನಾನಾ ಕಾರಣಗಳು ಉಪಾಯಗಳನ್ನ ಹುಡುಕುತ್ತಿರುತ್ತಾರೆ. ಆದ್ರೆ ಈ ಯುವತಿಯರು ಮಾಡಿದ ಕಳ್ಳಾಟದ ಬಗ್ಗೆ ಕೇಳಿದ್ರೆ ನೀವೂ ದಂಗಾಗ್ತೀರಾ… ವಾಟ್ ಆನ್ ಫ್ಲಾಪ್ ಐಡಿಯಾ ಮಾಡಮ್ ಜೀ ಅನ್ನೋ ಲೈನ್ ಈಕೆಗೆ ಸಖತ್ತಾಗಿ ಸ್ಯೂಟ್ ಆಗುತ್ತೆ ..
ಹೌದು.. ಬಾಲಿ ಪ್ರದೇಶದ ಸೋಶಿಯಲ್ ಮೀಡಿಯಾ ಸ್ಟಾರ್ ಗಳಾದ ಜೋಶ್ ಪಾಲರ್ ಲಿನ್ ಮತ್ತು ಲಿಯಾಸೆ ಮಾಸ್ಕ್ ಹಾಕುವ ಬದಲು ಮುಖಕ್ಕೆ ಮಾಸ್ಕ್ನಂತೆ ಕಾಣುವ ಹಾಗೆ ಬಣ್ಣ ಬಳಿದುಕೊಂಡು ಅಧಿಕಾರಿಗಳಿಗೆ ಫೂಲ್ ಮಾಡಲು ಹೋಗಿದ್ದರು. ಇದನ್ನು ತಿಳಿದ ಪೊಲೀಸರು ಇಬ್ಬರ ಪಾಸ್ಪೋರ್ಟ್ ವಶಪಡಿಸಿಕೊಂಡಿದ್ದಾರೆ.
ಮಾಸ್ಕ್ ಇಲ್ಲದೆ ಇಬ್ಬರು ಸೂಪರ್ ಮಾರ್ಕೇಟ್ಗೆ ಹೋಗಿದ್ದಾರೆ. ಅಲ್ಲಿನ ಸೆಕ್ಯುರಿಟಿ ಇವರನ್ನು ತಡೆದಿದ್ದಾನೆ. ನಂತರ ಅಲ್ಲಿಂದ ವಾಪಸ್ಸಾದ ಈ ಇಬ್ಬರು ಮುಖಕ್ಕೆ ಬಣ್ಣ ಬಳಿದುಕೊಂಡು ಮತ್ತೆ ಅದೇ ಮಾರ್ಕೇಟ್ ಗೆ ಹೋದಾಗ ಅಲ್ಲಿದ್ದ ಸೆಕ್ಯುರಿಟಿ ಈ ಇಬ್ಬರನ್ನು ಒಳಗಡೆಬಿಟ್ಟಿದ್ದಾನೆ. ನಂತರ ಇವರು ಪೋಲೀಸ್ ಅಧಿಕಾರಿಯ ಬಳಿ ಸಿಕ್ಕಿಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಯುವತಿಯರ ಕಳ್ಳಾಟಕ್ಕೆ ನೆಟ್ಟಿಗರು ಕಮೆಂಟ್ ಗಳ ಮೂಲಕ ಟ್ರೋಲ್ ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಹಲವರು ಹೀಗೂ ಪ್ಲಾನ್ ಮಾಡಬಹುದಾ ಎಂದು ಯೋಚನೆಗೆ ಬಿದ್ದಿದ್ದಾರೆ.
‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ – ಸತೀಶ್ ನಿನಾಸಂ
ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನ
ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ : ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!
ಭಾರತಕ್ಕೆ ಸಹಾಯ ಮಾಡಿ ಎಂದು ಬೇಡಿಕೊಂಡ ಪ್ರಿಯಾಂಕಾ ಪತಿ ನಿಕ್ ಜೋನಸ್..!