ಲಕ್ನೋ: ರಾಜ್ಯದಲ್ಲಿ ಬಾರೀ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಹಲಾಲ್ ಈಗ ಉತ್ತರ ಪ್ರದೇಶಕ್ಕೆ ಕಾಲಿಟ್ಟಿದೆ. ಅಲ್ಲಿ ಹಲಾಲ್ (Halal) ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನು ಸರ್ಕಾರ ನಿಷೇಧ ಮಾಡಿದೆ.
ಕೂಡಲೇ ಜಾರಿಗೆ ಬರುವಂತೆ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟ ಮೇಲೆ ನಿಷೇಧ ಹೇರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆಹಾರ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣವು ಒಂದು ಸಮಾನಾಂತರ ವ್ಯವಸ್ಥೆಯಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.
ನಕಲಿ ಹಲಾಲ್ ಪ್ರಮಾಣ ಪತ್ರಗಳನ್ನು ಒದಗಿಸುವ ಮೂಲಕ ಮಾರಾಟ ಹೆಚ್ಚಿಸುವುದು. ಜನರ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಆರೋಪದ ಮೇಲೆ ಕಂಪನಿಯೊಂದರ ಮತ್ತು ಇತರ ಕೆಲವು ಸಂಸ್ಥೆಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾದ ನಂತರ ಈ ಆದೇಶ ಹೊರಡಿಸಲಾಗಿದೆ.