ನಿಷೇಧದ ನಡುವೆಯೂ ಹೋಳಿ ಆಚರಿಸಿದ ಬನಾರಸ್ ಹಿಂದೂ ವಿವಿ ವಿದ್ಯಾರ್ಥಿಗಳು…
ಇದೇ ತಿಂಗಳ 8 ರಂದು ಹೋಳಿ ಹಬ್ಬವನ್ನ ದೇಶಾದ್ಯಂತ ಆಚರಿಸಲಾಗುತ್ತದೆ. ಆದರೆ ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಶ್ವವಿದ್ಯಾಲಯದೊಳಗೆ ಹೋಳಿ ಆಚರಣೆಯನ್ನು ನಿಷೇಧಿಸಿದೆ. ಉಪಕುಲಪತಿಗಳು ಈ ಕುರಿತು ಆದೇಶ ಹೊರಡಿಸಿದ್ದು, ನಿರ್ಬಂಧಗಳನ್ನ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ವಿದ್ಯಾರ್ಥಿಗಳು ಅದನ್ನು ಲೆಕ್ಕಿಸದೆ ಹೋಳಿ ಆಚರಿಸಿದ್ದಾರೆ.
ವಿಶ್ವವಿದ್ಯಾನಿಲಯದ ನಿಷೇಧದ ನಿರ್ಧಾರವನ್ನು ಧಿಕ್ಕರಿಸಿ ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಹೋಳಿ ಆಚರಿಸಿದರು. ಡಿಜೆ ಸಂಗೀತದ ನಡುವೆ ಬಣ್ಣ ಎರಚಿದ್ದಾರೆ. ವಿಶ್ವವಿದ್ಯಾಲಯ ಹೊರಡಿಸಿರುವ ಆದೇಶದ ವಿರುದ್ಧ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ. ಇದರಿಂದ ಅನ್ಯಾಯವಾಗಿದೆ ಎಂದು ವಿಶ್ವವಿದ್ಯಾಲಯ ಎಬಿವಿಪಿ ಅಧ್ಯಕ್ಷ ಅಭಯಸಿಂಗ್ ಹೇಳಿದರು.
ವಿಸಿ ಕಳೆದ ವರ್ಷ ಇಫ್ತಾರ್ ಕೂಟ ನೀಡಿದ್ದು, ಹೋಳಿ ನಿಷೇಧ ಮಾಡಿದ ನಂತರ ಇಫ್ತಾರ್ ಕೂಟ ಆಯೋಜಿಸಿದ್ದು ಹೇಗೆ ಎಂದು ಕೆಲ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಹೋಳಿಗೂ ಮುನ್ನ ಬಿಎಚ್‌ಯು ಹಾಸ್ಟೆಲ್‌ನಲ್ಲಿ ಗಲಾಟೆ ನಡೆದಿತ್ತು. ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಘರ್ಷಣೆ ಮತ್ತು ಕಲ್ಲು ತೂರಾಟದಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.
Banaras Holi: Students of Banaras Hindu University celebrated Holi despite the ban…