ಶವಗಳನ್ನ ಕಡೆದಂತೆ ಇಡುವ ಸಂಶೋಧನೆ, ಬೆಂಗಳೂರು ವೈದ್ಯರಿಂದ ಸಾಧನೆ….
ವೈದ್ಯ ಲೋಕದಲ್ಲಿ ಹಲವಾರು ಅಚ್ಚರಿಗಳು ಆಗಾಗೇ ನಡೆಯುತ್ತಲೇ ಇರುತ್ತವೆ ಇಂಥ ಅಚ್ಚರಿ ಸಂಶೋಧನೆ, ಪ್ರಯೋಗಳಲ್ಲಿ ಬೆಂಗಳೂರು ಸಹ ಭಾಗಿಯಾಗಿದೆ. ಸತ್ತ ವ್ಯಕ್ತಿಯ ಶವವನ್ನ ಕೆಲ ದಿನಗಳಿಟ್ಟರೇ ಕೊಳೆಯಲು ಆರಂಭವಾಗುತ್ತದೆ. ಆದರೆ, ರಾಸಾಯನಿಕಗಳನ್ನ ಬಳಸಿ ನೂರಾರು ವರ್ಷಗಳ ಕಾಲ ಇಡುವ ಸಂಶೋದನೆ ಮಾಡಿ ಮುಗಿಸಿದ್ದಾರೆ ಬೆಂಗಳೂರಿನ ಡಾಕ್ಟರ್.
ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಇಂಥದೊಂದು ಸಾಧನೆ ಮಾಡಿದ್ದಾರೆ. ಸತ್ತ ನಂತರ ಕೆಲ ರಾಸಾಯನಿಕಗಳನ್ನ ಬಳಸಿ ದೇಹವನ್ನ ಜೀವಂತ ಕಾಣುವ ಹಾಗೇ ಸಂರಕ್ಷಿಸಿಟ್ಟಿದ್ದಾರೆ. ಜೀವಂತ ದೇಹದಂತೆಯೇ ಕಾಣುವ ಶವಗಳು ಕೊಳೆಯುವುದು ಅಥವಾ ವಾಸನೆಯು ಬರೋದಿಲ್ಲ. ನಾಲ್ಕು ಶವಗಳನ್ನು ಇದೇ ರೀತಿ ಸಂರಕ್ಷಿಸಿ ಇಡುವ ಮೂಲಕ, ಫಾರೆನ್ಸಿಕ್ ತಜ್ಞ ಡಾ.ದಿನೇಶ್ ಅವರ ಸಾಧನೆ ಜಗತ್ತಿನ ಮುಂದೆ ಅನಾವರಣವಾಗಿದೆ.
ಹೀಗೆ ನಾಲ್ವರ ಶವಗಳನ್ನು ಒಂದೆಡೆ ಇಟ್ಟು ಪ್ರಾಯೋಗಿಕವಾಗಿ ಡಾ. ರಾವ್ ತೋರಿಸಿದ್ದಾರೆ. ಶವವನ್ನು ಕೊಳೆಯಲು ಬಿಡದೆ, ವಾಸನೆ ಬಾರದಂತೆಯೂ ಮಾಡುವ ವಿಶ್ವದ ಮೊಟ್ಟ ಮೊದಲ ಸಂಶೋಧನೆ ಇದಾಗಿದೆ! ಆನೇಕಲ್ ತಾಲೂಕಿನ ಆಕ್ಸ್ಫರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಪುಟ್ಟ ಮಗುವಿನ ಶವ ಹಾಗೂ ಇತರೆ ಮೂವರು ವ್ಯಕ್ತಿಗಳ ಶವಗಳನ್ನು ಪ್ರದರ್ಶಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲು ಸಾಧಿಸಿರುವುದನ್ನು ಡಾ. ದಿನೇಶ್ ರಾವ್ ಪ್ರಸ್ತುತಪಡಿಸಿದ್ದಾರೆ.