ನವದೆಹಲಿ: ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ ನಡೆದಿದ್ದು, 48 ಗಂಟೆಗಳಲ್ಲಿಯೇ ಪ್ರಕರಣ ಭೇದಿಸಲಾಗಿದೆ.
ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ ತಲೆಯ ಮೇಲೆ ಬಿದ್ದಿದ್ದ ಗುಂಡಿನ ಗಾಯದಿಂದಾಗಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನನ್ನು ಬಂಧಿಸಲಾಗಿದೆ. ಆಟೋ ಚಾಲಕ ಮನೆಗೆ ಡ್ರಾಪ್ ಕೊಡುವ ವೇಳೆ ನಡೆದ ಮಾತಿನ ಚಕಮಕಿಯಿಂದ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿ ಜುಗಲ್ ಕಿಶೋರ್ ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕಾಲುವೆ ಬಳಿ ಶವವನ್ನು ನೋಡಿದ್ದಾರೆ. ಕೂಡಲೇ ಸಹೋದ್ಯೋಗಿಗಳನ್ನು ಸ್ಥಳಕ್ಕೆ ಕರೆಯಿಸಿ ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುವುದರ ಮೂಲಕ ಆರೋಪಿಯನ್ನು ಹೆಡೆಮೂರಿ ಕಟ್ಟಿದ್ದಾರೆ.








