ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಪುರಸಭಾ ಸದಸ್ಯನ (Congress Municipal Councilor)ನ್ನು ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆನೇಕಲ್ (Anekal) ಪಟ್ಟಣದ ಬಹದ್ದೂರ್ ಪುರದ ಹತ್ತಿರ ಈ ಘಟನೆ ನಡೆದಿದೆ. ಕಾಂಗ್ರೆಸ್ ಪಕ್ಷದ (Congress Party) ಪುರಸಭಾ ಸದಸ್ಯ ರವಿ ಕೊಲೆಯಾದ ದುರ್ದೈವಿ. ಹಂತಕರು ಹೊಂಚು ಹಾಕಿ ಬರ್ಬರವಾಗಿ ಕೊಚ್ಚೆ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ನಂತರ ಹಂತಕರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ 15 ದಿನಗಳಿಂದಲೂ ಯುವಕರ ಗ್ಯಾಂಗ್‌ವೊಂದು ಲಾಂಗ್ ಹಿಡಿದು ಓಡಾಡುತ್ತಿತ್ತು. ಅದೇ ಯುವಕರ ಗ್ಯಾಂಗ್‌ನಿಂದ ಬಹದ್ದೂರ್‌ಪುರದ ಬಳಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯ ಆಧಿರಿಸಿ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಹಳೆ ವೈಷಮ್ಯದಿಂದಾಗಿ ಈ ಘಟನೆ ನಡೆದಿದೆ.








