ಬಾರ್ಜ್ ಪಿ-305 ದುರಂತ: 61 ಮೃತದೇಹಗಳು ಪತ್ತೆ
ಮಹಾರಾಷ್ಟ : ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ ಮತ್ತೆ 10 ಮೃತದೇಹಗಳು ಪತ್ತೆಯಾಗಿದೆ.
ಮೇ 17ರಂದು ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ ನಡೆದ ಪಿ-305 ಬೋಟ್ ಕೊಚ್ಚಿ ಹೋಗಿತ್ತು.
ನೌಕೆಯಲ್ಲಿದ್ದ 261 ಜನರ ಪೈಕಿ 188 ಮಂದಿಯನ್ನು ರಕ್ಷಿಸಲಾಗಿದ್ದು, ಈವರೆಗೆ 61 ಜನರ ಮೃತದೇಹ ಸಿಕ್ಕಿದೆ.
61ರ ಪೈಕಿ 26 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ವಿಧಿವಿಧಾನಗಳ ನಂತರ ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಆದರೆ ಬೋಟ್ ದುರಂತ ನಡೆದು ಐದು ದಿನಗಳು ಕಳೆದಿದ್ದು, ಸಾಕಷ್ಟು ಶವಗಳು ಕೊಳೆತ ಮತ್ತು ಗುರುತಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ.
ಹೀಗಾಗಿ ಸಂಬಂಧಿಕರ ಡಿಎನ್‍ಎ ಮಾದರಿಯನ್ನು ಪಡೆಯಲಾಗುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.