ತುಮಕೂರು: ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ನಡೆದಿದೆ.
ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅಲ್ಲಿ ಕಟ್ಟಿದ್ದ 9 ಹಸುಗಳು, 20 ಮೇಕೆಗಳು ಸಾವನ್ನಪ್ಪಿವೆ. ಈ ಘಟನೆ ತಾಲೂಕಿನ ಕಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕಣ್ಣ ಎಂಬುವವರಿಗೆ ಸೇರಿದ್ದಾಗಿವೆ ಎನ್ನಲಾಗಿದೆ. ಇದಲ್ಲದೇ, ಟ್ರ್ಯಾಕ್ಟರ್, ಅಡಿಕೆ ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಹೊತ್ತಿದ್ದು ನೋಡುತ್ತಿದ್ದಂತೆ ಸ್ಥಳೀಯರ ಸಹಾಯದಿಂದ ನಾಲ್ಕೈದು ಜಾನುವಾರುಗಳನ್ನು ರಕ್ಷಿಸಲಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬದುಕಿಗೆ ಆಧಾರವಾಗಿದ್ದ ಜಾನುವಾರುಗಳು ಹಾಗೂ ಯಂತ್ರೋಪಕರಣಗಳನ್ನು ಕಳೆದುಕೊಂಡು ರೈತ ಗೋಳಾಡುತ್ತಿದ್ದಾರೆ.