ಕಣ್ಣಲ್ಲಿ ನೀರು ತರಿಸುತ್ತೆ ಅಪ್ಪು ಹಣೆಗೆ ಸಿಎಂ ಬೊಮ್ಮಾಯಿ ಮುತ್ತಿಟ್ಟು ಅತ್ತ ಕ್ಷಣ
ಬೆಂಗಳೂರು: ಕೋಟ್ಯಾಂತರ ಅಭಿಮಾನಿಗಳನ್ನ ಬಿಟ್ಟು ಕಾಣದಂತೆ ಮಾಯವಾದ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಶಿವರಾಜ್ ಕುಮಾರ್ , ಸುದೀಪದ್ , ಇಡೀ ಸಿನಿಮಾರಂಗ , ಅಭಿಮಾಣಿಗಳು ಅಶ್ರುತರ್ಪಣದ ಮೂಲಕ ಪುನೀತ್ ಅವರನ್ನ ಕಳುಹಿಸಿಕೊಟ್ಟಿದ್ದಾರೆ.
ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಮುಂಜಾನೆ 4.30 ಸುಮಾರಿಗೆ ಸಿಎಂ ಆಗಮನ ಕಂಠೀರವ ಸ್ಟೇಡಿಯಂ ಆಗಮಿಸಿ ಶಿವಣ್ಣ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಬಸವರಾಜ ಬೊಮ್ಮಾಯಿ ಅವರು ಅಪ್ಪು ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದರು. ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕರಿಗೆ ಅವಕಾಶವಿರಲಿಲ್ಲ. ಪಾರ್ಥಿವ ಶರೀರದ ಜೊತೆಗೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರು ಇದ್ದಾರೆ. ಈಡಿಗ ಸಂಪ್ರದಾಯದಂತೆ ಪುನೀತ್ ಅವರ ಅಂತ್ಯಕ್ರಿಯೆ ನೆರವೇರಿತು.